ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿ ಯಾರಿಗೆ ಎಂಬ ಚರ್ಚೆ

ಹಾನಗಲ್ಲ :

             ಸ್ಪಷ್ಠ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಾನಗಲ್ಲ ಪುರಸಭೆ ಚುನಾವಣೆಯ ಕಾಂಗ್ರೇಸ್ ಜಯಶಾಲಿಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿ ಯಾರಿಗೆ ಎಂಬ ಚರ್ಚೆ ಆರಂಭವಾಗಿದ್ದು, ಎರಡು ದಶಕಗಳ ಕಾಲ ಬಿಜೆಪಿ ಆಡಳಿತ ನೋಡಿದ ಕಾಂಗ್ರೇಸ್ ನಿಲುವು ಹೊರಬೀಳಬೇಕಾಗಿದೆ.
              ಹಾನಗಲ್ಲ ಪುರಸಭೆಯ 23 ಸ್ಥಾನಗಳಲ್ಲಿ 19 ಸ್ಥಾನ ಗೆದ್ದಿರುವ ಕಾಂಗ್ರೇಸ್ ಪಕ್ಷಕ್ಕೆ ಪ್ರಯಾಸವಿಲ್ಲದೆ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಕಳೆದ ಹತ್ತು ವರ್ಷಗಳಿಂದ ಪುರಸಭೆಯಲ್ಲಿ ವಿರೊಧ ಪಕ್ಷವಾಗಿದ್ದ ಕಾಂಗ್ರೇಸ್ ಈಗ ಆಡಳಿತಕ್ಕೆ ಸಜ್ಜಾಗಿದೆ. ಆದರೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಯಾವುದೆ ಗೊಂದಲ ಭಿನ್ನಾಬಿಪ್ರಾಯಗಳಿಗೆ ಅವಕಾಶವಿಲ್ಲದಂತೆ ನಡೆಯಬೇಕೆಂಬುದು ಪಕ್ಷದಲ್ಲಿನ ಹಿರಿಯರ ಚಿಂತನೆಯಾಗಿದೆ.
              ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಹಿಂದುಳಿದ ಅ ವರ್ಗದ ಮಹಿಳೆ ಉಪಾಧ್ಯಕ್ಷೆ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ಆಯ್ಕೆಯಾದ 19 ಕಾಂಗ್ರೇಸ್ ಸದಸ್ಯರಲ್ಲಿ 9 ಮಹಿಳಾ ಸದಸ್ಯರಿದ್ದಾರೆ. ವೀಣಾ ಗುಡಿ, ರಾಧಿಕಾ ದೇಶಪಾಂಡೆ, ಗಂಗೂಬಾಯಿ ನಿಂಗೋಜಿ, ಮಮತಾ ಆರೇಗೊಪ್ಪ, ಶಮ್‍ಶಿಯಾಬಾನು ಬಾಳೂರ, ನಾಶೀರಾ ಬಡಗಿ, ಸುನಿತಾ ಭದ್ರಾವತಿ, ರಶೀದಾಭಿ ನಾಯ್ಕನವರ, ಶೋಭಾ ಹೊಂಬಳಿ ಇವರುಗಳಾಗಿದ್ದಾರೆ. ಆದರೆ ಇವರಲ್ಲಿ ಗಂಗೂಬಾಯಿ ನಿಂಗೋಜಿ, ಮಮತಾ ಆರೆಗೊಪ್ಪ, ಶಮ್‍ಶಿಯಾಬಾನು ಬಾಳೂರ ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೂ ಒಳಪಡುತ್ತಾರೆ.
            ಸದ್ಯದ ಸಂದರ್ಭದಲ್ಲಿ ವೀಣಾ ಗುಡಿ, ರಾಧಿಕಾ ದೇಶಪಾಂಡೆ, ಗಂಗೂಬಾಯಿ ನಿಂಗೋಜಿ, ಮಮತಾ ಆರೇಗೊಪ್ಪ, ಶಮ್‍ಶಿಯಾಬಾನು ಬಾಳೂರ ಇವರ ನಡುವೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಾಣಿಸಿಕೊಂಡಿದೆ.
ಕಾಂಗ್ರೇಸ್ ನಾಯಕರಾದ ಮಾಜಿ ಸಚಿವ ಮನೋಹರ ತಹಶೀಲ್ದಾರ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರ ಒಕ್ಕಟ್ಟಿನ ತೀರ್ಮಾನದಿಂದ ಯಾವುದೇ ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯುವುದೆಂಬ ವಿಶ್ವಾಸ ಕಾಂಗ್ರೇಸ್ ವಲಯದಲ್ಲಿ ದಟ್ಟವಾಗಿದೆ.

ನಿರಾಸೆ :
              ಹಾನಗಲ್ಲ ಪುರಸಭೆಯಲ್ಲಿ ಅನಿರೀಕ್ಷಿತವೋ ಅಥವಾ ಒಳ್ಳೆಯ ಅವಕಾಶವೋ ಎಂಬಂತೆ ಸ್ಪಷ್ಟ ಬಹುಮತ ಬಂದದ್ದರಿಂದ ಅಧ್ಯಕ್ಷರಾಗುವ ಬಯಕೆ ಹೊತ್ತ ಪುರುಷ ಸದಸ್ಯರಿಗೆ ಇದು ನಿರಾಸೆ ಉಂಟು ಮಾಡಿದೆ. ಮಾಜಿ ಅಧ್ಯಕ್ಷರುಗಳಾಗಿದ್ದ ಕಾಂಗ್ರೇಸ್ ಸದಸ್ಯರಾದ ಅಹ್ಮದಬಾಷಾ ಪೀರಜಾದೆ, ಎನ್.ಐ,ಸವಣೂರ ಸೇರಿದಂತೆ ಹಲವರು ಅಧ್ಯಕ್ಷ ಗಾದಿಯ ಮೇಲೆ ಇಟ್ಟ ಕಣ್ಣು ಬದಲಾಗಿ ಈಗ ಅಧ್ಯಕ್ಷ ಉಪಾಧ್ಯಕ್ಷ ಗೌರವವನ್ನು ಮಹಿಳೆಯರಿಗೆ ನೀಡಬೇಕಾಗಿದೆ.

Recent Articles

spot_img

Related Stories

Share via
Copy link