ಗ್ರಾಮ ಸ್ವರಾಜ್ಯ ಪ್ರಶಸ್ತಿ ವಿಜೇತ ಗ್ರಾಮದ ಗೋಳು ಕೇಳೋರು ಯಾರು

   ಗಾಂಧಿಜಿಯ ಕನಸನ್ನು ನೆನಸು ಮಾಡುವತ್ತ ಈ ಗ್ರಾಮ ಸಾಗುತ್ತಿದೆ. ಇಲ್ಲಿನ ಗ್ರಾಮ ಪಚಾಯಿತಿಯ ಸಲಹೆ ಮತ್ತು ನೀಡುವ ವಂತಿಕೆಯಿಂದ ಪ್ರತಿಯೊಂದು ಮನೆಯಲ್ಲಿಯೂ ಶೌಚಲಯ ನಿರ್ಮಿಸಿಕೊಂಡು ಬಯಲು ದರ್ಸೆ ಮುಕ್ತ ಗ್ರಾಮವಾಗಿ ಇತರೆ ಗ್ರಾಮಗಳಿಗೆ ಈ ಗ್ರಾಮ ಮಾದರಿಯಾಗಿದೆ.
ಹೌದು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಗೆಣೆಕೆಹಾಳ್ ಗ್ರಾಮ ಬಳ್ಳಾರಿಯಿಂದ ಸುಮಾರು 32 ಕೀ.ಮಿ ಇದ್ದು ಕುರುಗೋಡಿನಿಂದ 5 ಕೀ.ಮಿ ಸಾಗಬೇಕು. ಇಲ್ಲಿ ಸೂಮರು 4683 ಜನರು ವಾಸಿದುತ್ತಿದ್ದು ಇಲ್ಲಿಯವೆರಗೆ 587 ಶೌಚಲಯ ನಿರ್ಮಿಸಿ ರಾಜ್ಯಮಟ್ಟದಲ್ಲಿ ಗ್ರಾಮ ಸ್ವರಾಜ್ಯ ಪ್ರಶಸ್ತಿಗೆ ಗೆಣಿಕೆಹಾಳ್ ಗ್ರಾಮ ಭಾಜನವಾಗಿದೆ.

 

    ಪಂಚಾಯಿತಿಯ ಕಾರ್ಯ ವ್ಯಾಪ್ತಿ
ಗೆಣೆಕೆಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೆಣಿಕೆಹಾಳ್, ಗೆಣೆಕೆಹಾಳ್ ಕ್ಯಾಂಪ್, ಕ್ಯಾದಿಗೆಹಾಳ್, ಬಸಪುರ ಗ್ರಾಮಗಳು ಒಳಪಡುತ್ತವೆ ಒಟ್ಟು ಜನ ಸಂಖ್ಯೆ 6040 ಈ ಗ್ರಾಮಗಳು ನೂತನ ತಾಲ್ಲೂಕು ಕುರುಗೋಡಿಗೆ ಹತ್ತಿರ ಇರುವ ಗ್ರಾಮಗಳಾದರೂ ಹಿಂದೂಳಿದಿವೆ.
ಈ ನಿಟ್ಟಿನಲ್ಲಿ ಈ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಜಯಲಕ್ಷ್ಮಿ ಮತ್ತು ಅಧ್ಯಕ್ಷ ಶಾಂತನಗೌಡರ ಒಂದಿಷ್ಟು ಕಾಳಜಿವಹಿಸಿ ಬಯಲು ದಸೆ ಮುಕ್ತ ಗ್ರಾಮವಾಗಿ ಮಾಡಲು ಶ್ರಮಿಸಿರುವುದು ಶ್ಲಾಘನೀಯ ಇದಕ್ಕೆ ಜನರು ಕೂಡ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ.

   ಬಯಲು ದಸೆ ಮುಕ್ತ ಗ್ರಾಮ
ಹಿಂದೆ ಈ ಹಳ್ಳಿಯಲ್ಲಿ ಬೆರಳೇಣಿಕೆ ಜನ ಮಾತ್ರ ತಾವೇ ಕಾಳಜಿವಹಿಸಿ ಶೌಚಲಯಗಳನ್ನು ನಿರ್ಮಿಸಿಕೊಂಡಿದ್ದರು ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮನೆ ಮನೆಗೆ ತೆರಳಿ ಜನರಲ್ಲಿ ಬಯಲು ಶೌಚಾಲಯಗಳಿಂದ ಆಗುವ ಹನಿ , ಅರಡುವ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತ್ತು. ಸರ್ಕಾರ ಎ.ಸಿ ಎ.ಸ್ಟಿ 15 ಸಾವಿರ ಹಾಗೂ ಇತರೆ ಎಲ್ಲಾ ವರ್ಗಗಳಿಗೆ 12 ಸಾವಿರ ಬಿಡುಗಡೆ ಮಾಡುತ್ತದೆ. ಇವುಗಳನ್ನು ಬಳಕೆ ಮಾಡಿಕೊಂಡಿಕೊಳ್ಳುವಂತೆ ಮನವಿ ಮಾಡಿತ್ತು. ಆದರೆ ಹಳ್ಳಿಗಳಲ್ಲಿ ಇಕ್ಕಟ್ಟಾದ ಪ್ರದೇಶಗಳಲ್ಲಿ ಮನೆಗಳು ತಲೆ ಎತ್ತಿರುವುದು ಒಂದು ಸವಾಲಾದರೆ ಇನ್ನೂ ಕೈಯಲ್ಲಿ ಹಣ ಇಲ್ಲ ಸರ್ಕಾರ ಬೇಗ ಹಣ ಬಿಡುಗಡೆ ಮಾಡುವುದಿಲ್ಲ ಎನ್ನುವುದು ಜನರ ಮನೋಭಾವನೆ ಆಗಿತು.ಇಂತವರಿಗಾಗಿ ಲೋನ್ ಸೌಲಭ್ಯ ವದಗಿಸುವುದರ ಜತೆಗೆ ಜನರ ಮನವಲಿಸಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಗ್ರಾಮ ಪಂಚಾಯಿತಿ ಯೋಜನೆ ರೂಪಿಸಿತು. ಸಂಘ ಸಂಸ್ಥೆಗಳಾದ ಕನಕ ಛಲಪತಿ ಕೋಪರೆಟೀವ್ ಸಂಸ್ಥೆ ಗೆಣಿಕೆಹಾಳ್ , ಸ್ಮೈಲ್ ಸಂಸ್ಥೆ ಕುರುಗೋಡಿಗೆ ಗುತ್ತಿಗೆ ನೀಡಿ ಮನೆ ಮನೆಗೆ ಶೌಚಾಲಯಗಳನ್ನು ರೆಡಿಮೆಡ್ ಹಾಗೂ ಎಳ್ಳೆಯಿಂದ ನಿರ್ಮಾಣ ಮಾಡುವ ಆಯ್ಕೆಯನ್ನು ಜನರಿಗೆ ಬಿಟ್ಟಿದ್ದರಿಂದ ದುಡ್ಡಿನ ಸಮಸ್ಯೆ ದೂರವಾಗಿ ಅವರಿಗೆ ಯಾವುದು ಬೇಕೋ ಅದನ್ನು ನಿರ್ಮಾಣ ಮಾಡಿಕೊಂಡಿದ್ದರಿಂದ 100% ರಷ್ಟು ಶೌಚಾಯಗಳ ಗುರಿ ತಲುಪಿತು.

   ಗ್ರಾಮಕ್ಕೆ ಒಲಿದ ಗ್ರಾಮ ಸ್ವರಾಜ್ಯ ಪ್ರಶಸ್ತಿ
ಪ್ರರಂಭದಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯವನ್ನು ಗುರುತಿಸಿ ಬಳ್ಳಾರಿ ತಾಲ್ಲೂಕಿನ 39 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೆಣೆಕೆಹಾಳ್ ತಾಲ್ಲೂಕು ಮಟ್ಟದ ಗ್ರಾಮ ಪಂಚಾಯಿತಿಯಲ್ಲಿ ಮೊದಲ ಸ್ಥಾನ ಪಡೆದಿದ್ದರಿಂದ ಡಿ.ಸಿ ರಾಮ್ ಪ್ರಸಾದ್ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು ನಂತರ ಇದರಿಂದ ಉತ್ತೇಜನ ಪಡೆದು ರಾಜ್ಯ ಮಟ್ಟದಲ್ಲಿ ಕೂಡ ಹಿಂದಿನ ಮುಖ್ಯಮುಂತ್ರಿ ಸಿದ್ದರಾಮಯ್ಯ ಸರ್ಕಾರ ಗ್ರಾಮಕ್ಕೆ ಗ್ರಾಮ ಸ್ವರಾಜ್ಯ ಪ್ರಶಸ್ತಿಯನ್ನು ಜೂನ್ 26 2017 ರಲ್ಲಿ ನೀಡಿ ಗೌರವಿಸಿದೆ. ಇದಲ್ಲದೆ ಉದ್ಯೋಗ ಖಾತ್ರಿ ಯೋಜನೆ ಮತ್ತು ಸ್ವಚ್ಛಗ್ರಾಮದಲ್ಲೂ ಎರಡನೇ ತಾಲ್ಲೂಕಿನಲ್ಲಿ ಎರಡನೇ ಸ್ಥಾನದಲ್ಲಿದೆ.

   ತೆರಿಗೆ ಸಂಗ್ರಹ
ಸ್ಥಳೀಯ ಸರ್ಕಾರಗಳಿಗೆ ಅವುಗಳದ್ದೇ ಕಾರ್ಯವ್ಯಪ್ತಿ ಮತ್ತು ಅಧಿಕಾರವ್ಯಾಪ್ತಿ ಇದ್ದು ಇದರಿಂದ ಗ್ರಾಮಗಳಲ್ಲಿ ತೆರಗೆಯನ್ನು ವಾರ್ಷಿಕವಾಗಿ 2.70 ಲಕ್ಷ ಸಂಗ್ರಹಿಸಿ ಎಸ್ಸಿ ಎಸ್ಟಿ ಪ್ರದೇಶಗಳಿಗೆ 25% ಅಭಿವೃದ್ಧಿಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಜತಗೆ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಬಿಲ್ ಬುಕ್ ಮಾಡಿ ಅವರ ವಿದ್ಯಾಭ್ಯಾಕ್ಕಾಗಿ ನೀಡಲಾಗುತ್ತಿದೆ.
ಇದಿಷ್ಟು ಗ್ರಾಮದ ಒಂದು ಮುಖವಾದರೆ ಇನ್ನೊಂದಡೆ ಗ್ರಾಮ ಸ್ವರಾಜ್ಯ ಪ್ರಶಸ್ತಿ ವಿಜೇತ ಗ್ರಾಮದ ಗೋಳು ಕೇಳೋರು ಯಾರು ಎನ್ನುವಂತಾಗಿಗೆ ಈ ಗ್ರಾಮ ಸಾಕಷ್ಟು ಸಮಸ್ಯೆಗಳಿಂದ ಕುಡಿದ್ದು ವರ್ಷಗಳೇ ಕಳೆದರೂ ಶುದ್ಧ ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆಯಂತು ಹೇಳತೀರದು ಅಷ್ಟು ಹದಗೆಟ್ಟುಹೋಗಿದೆ. ಮಳೆ ಬಂದರೆ ಸಾಕು ರಸ್ತೆಗಳು ಕೆಸರು ಗದ್ದಗಳಾಗಿ ಮಾರ್ಪಾಡಾಗುತ್ತವೆ.

 

   ತ್ಯಾಜ್ಯವಿಲೇವಾರಿ ಘಟಕವಿಲ್ಲದೆ ಹದಗೆಟ್ಟ ಸ್ವಚ್ಛತೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಣ ಮತ್ತು ಹಸಿ ಕಸವನ್ನು ವಿಲೇವಾರಿ ಮಾಡುವ ಘಟಕ ಇಲ್ಲದಿರುವುದರಿಂದ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಕಸದಿಂದ ತುಳುಕುತ್ತಿದೆ. ಗ್ರಾಮದ ಬೀದಿ ಬೀದಿಗಳಲ್ಲಿ ಜನರು ಬಟ್ಟೆ , ಹಿಂಡುವುದರಿಂದ ನೀರು ಹರಿದು ಓಡಾಡಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ . ದಾರಿಯ ಪಕ್ಕದಲ್ಲೇ ತಿಪ್ಪೆಗಳು , ಕಲ್ಲಿನ ರಾಶಿಗಳು , ಕಟ್ಟಿಗೆ ಸಮಗ್ರಿಗಳು ತಲೆ ಎತ್ತಿವೆ. ಇದರಿಂದ ಜನಸಮಾನ್ಯರಿಗೆ ತೀರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

   ವರ್ಷಗಳೇ ಕಳೆದರೂ ಬಸ್ ನಿಲ್ದಾಣವಿಲ್ಲ
ಗ್ರಾಮದಲ್ಲಿ ಇದುವರೆಗೂ ಎರಡು ಬಸ್ ನಿಲ್ದಾಣಗಳು ಇದ್ದು ಸಂಪೂರ್ಣ ಹದಗೆಟ್ಟುಹೋಗುವೆ ಇಲ್ಲಿ ಜನರ್ಯಾರು ಕುಡುವಂತಿಲ್ಲ ಅಷ್ಟು ಗಬ್ಬು ನಾರುತ್ತಿವೆ. ಇಲ್ಲಿನ ಜನರಿಗೆ ಬಾಸ್‍ಗಾಗಿ ಬಿಸಿಲಲ್ಲೇ ನಿಂತು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

   ಶುದ್ಧ ಕುಡಿಯುವ ನೀರಿಗೆ ಚಾಲನೆ ಇನ್ನೂ ಸಿಕ್ಕಿಲ್ಲ
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಗಾಗಿ ಕರೆ ನಿರ್ಮಾಣ ಮಾಡಲಾಗಿದ್ದು ಈ ಕೆರೆಗೆ ಸಮೀಪದ ಕಾಲುವೆಯಿಂದ ಪಂಪ್ ಮಾಡಿ ನೀರು ತುಂಬಿಸಲಾಗುತ್ತಿದೆ. ಆದರೆ ಈ ನೀರು ಕೇವಲ ಶುದ್ಧ ಕುಡಿಯುವ ನೀರು ಘಟಕ್ಕೆ ಮಾತ್ರ ತಲುಪುತ್ತಿವೆ. ವರ್ಷಗಳೇ ಕಳೆದರೂ ಮನೆ ಮನೆಗೆ ಈ ನೀರು ತಲುಪುತ್ತಿಲ್ಲ ಎನ್ನುವುದು ಇಲ್ಲಿನ ಜನರ ಅಳಲಾಗಿದೆ.

  ಆರಂಭವಾಗದ ಗ್ರಾಮ ವಿಕಾಸ ಯೋಜನೆ
ಸರ್ಕಾರ ಗ್ರಾಮ ವಿಕಾಸ ಯೋಜನೆಗೆ ಒಂದು ಕೋಟಿ ಬಿಡುಗಡೆ ಮಾಡಿದ್ದರೂ ಇದುವರೆಗೆ 36 ಲಕ್ಷ ಮಾತ್ರ ಗ್ರಾಮ ಪಂಚಾಯಿತಿ ಬಿಡುಗಡೆ ಮಾಡಿಕೊಂಡಿದೆ. ದಿನ ಕಳೆಯುತ್ತಿದ್ದರು ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಇನ್ನೂ ಕೆಲಸವಾಗಿಲ್ಲ
ಮಂದಗತಿಯಲ್ಲಿ ಉದ್ಯೋಗ ಖಾತ್ರಿ

  ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿ ಮಾಡಿತ್ತು. ಅದರಂತೆ ಇದರ ಲಾಭವನ್ನು ಇಲ್ಲಿನ ರೈತರು ಹಾಗೂ ಗ್ರಾಮಸ್ಥರು ಬೇಸಿಗೆ ದಿನಗಳಲ್ಲಿ ಈ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ್ದರು ಕೂಡ ಅವರಿಗೆ ಸೂಕ್ತ ಸಮಯಕ್ಕೆ ಹಣ ಸಂದಾಯವಾಗುತ್ತಿಲ್ಲ ಎಂದು ಇಲ್ಲಿನ ಜನರು ದುರುತ್ತಿದ್ದಾರೆ.

  ಅಂದು ಮಹಾತ್ಮ ಗಾಂಧಿಜೀ ಅವರು ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ಭಾರತ ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ದರು. ಹಾಗೇ ಸುಚ್ಛತೆಯ ಕನಸು ಕೂಡ ಗಾಂಧಿಜೀಯವರದ್ದೇ ಆಗಿತು. ಇಲ್ಲೊಂದು ಗ್ರಾಮ ಶೌಚಲಯದಲ್ಲಿ ನೂರಕ್ಕೆ ನೂರುರಷ್ಟು ಯಶ್ವಸಿ ಸಾಧಿಸಿದ್ದರು ಅನೇಕ ಸಮಸ್ಯೆಗಳಿಂದ ಕೂಡಿದ್ದು ಸರ್ಕಾರ ಹಾಗೂ ಇಲ್ಲಿನ ಜನ ಪ್ರತಿನಿಧಿಗಳು ಕಾಳಜಿವಹಿಸಿ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವುದಾದರೆ ನಾವು ಕೂಡ ಸಹಕಾರ ನೀಡುತ್ತವೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಇನ್ನಾದರೂ ಸರ್ಕಾರ ಈ ಗ್ರಾಮದ ಕಡೆಗೆ ಎಚ್ಚಿತ್ತು ಅನುದಾನಗಳನ್ನು ನೀಡಿ ಇತರೆ ಗ್ರಾಮಗಳಿಗೆ ಮಾದರಿಯಾಗುವಂತೆ ಪ್ರೇರೆಪಿಸಬೇಕಿದೆ.

  ನಾವು ಈ ಹಿಂದೆ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದು ನಂತರ ರಾಜ್ಯ ಮಟ್ಟದಲ್ಲೂ ಯಶಸ್ವಿಯಾಗಿ ಗ್ರಾಮ ಸ್ವರಾಜ್ಯ ಪ್ರಶಸ್ತಿ ಪಡೆದಿದ್ದೇವೆ ಆದರೆ ಈಗ ನಮ್ಮ ಚಿತ್ತ ದೇಶಮಟ್ಟದಲ್ಲಿ ಗುರುತಿಸಿಕೊಳ್ಳುವ ಬಯಕೆ ಇದೆ. ಇದಕ್ಕೆ ಪೂರಕವಾಗಿ ನಾವು ಮತ್ತು ಇತರೆ ಎಲ್ಲಾ ಸಿಬ್ಬಂದಿ ವರ್ಗದವರು ಕೂಡ ಕಾರ್ಯನಿರ್ವಹಿಸುತ್ತಿದ್ದು ಜನರು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೆ ಸರ್ಕಾರ ಮತ್ತು ಇಲ್ಲಿನ ಶಾಸಕರು ಹಾಗೂ ಸಂಬಂಧ ಪಟ್ಟ ಸಚಿವರು ನಮ್ಮ ಗ್ರಾಮಗಳಿಗೆ ಇನ್ನಷ್ಟು ಅನುದಾನಗಳನ್ನು ಬಿಡುಗಡೆ ಮಾಡಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾವೆಲ್ಲರು ಸಿದ್ಧವಾಗಿದ್ದೇವೆ
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತನ ಗೌಡ

Recent Articles

spot_img

Related Stories

Share via
Copy link