ರಾಮನಗರ;
ಯಾವ ನಷ್ಟಕ್ಕೆ ನನ್ನ ಮೇಲೆ ಕೇಸ್ ಹಾಕುತ್ತೀರೋ ಹೋಗಿ ಹಾಕಿ, ನಾನೇನು ಏಲ್ಲೂ ಕದ್ದು ಹೋಗಲ್ಲ, ಪಲಾಯನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಿರುಗೇಟು ನೀಡಿದರು.
ರಾಮನಗರದಲ್ಲಿ ಮಾತನಾಡುತ್ತಿದ್ದ ಅವರು, ಬಿಎಸ್ವೈ ಪುತ್ರ ವಿಜಯೇಂದ್ರ ಐಟಿ ಅಧಿಕಾರಿಗಳ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿಮಗೆ ಏನು ನಷ್ಟ ಆಗಿದೆಯೋ ಅದರ ಮೇಲೆ ಕೇಸ್ ಹಾಕಿ, ಅದರ ಮೇಲೆ ಇನ್ನು ಏನಿದೆಯೋ ಅದಕ್ಕೂ ಕೇಸ್ ದಾಖಲಿಸಿ ಎಂದು ಹೇಳಿದರು.
ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಬೇಡ, ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ ರೈತರ ಸಾಲಮನ್ನಾ ಮಾಡುವುದು ಸತ್ಯ, ಇದರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ರೈತರಲ್ಲಿ ಮನವಿ ಮಾಡಿದರು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಮಾಡಿರುವ ಸಾಲವನ್ನು ನಾಲ್ಕು ಕಂತುಗಳಲ್ಲಿ ತೀರಿಸಲಾಗುವುದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.








