“ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಉದ್ಘಾಟನೆ”

ತುಮಕೂರು:

          ನಗರದ ಆರ್ಯನ್ ಪ್ರೌಢಶಾಲೆಯಲ್ಲಿ ದಿನಾಂಕ: 08.09.2018ರ ಶನಿವಾರ ಬೆಳಗ್ಗೆ:10:30ಕ್ಕೆ ಶಾಲಾ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಮಂಜೂರಾಗಿರುವ “ಅಟಲ್ ಟಿಂಕರಿಂಗ್ ಲ್ಯಾಬ್” ಇದರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
           ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯಸಂಶೋಧನಾ ವಿಜ್ಞಾನಿಗಳಾದ ಪ್ರೊ.ಎನ್.ಕೆ.ಎಸ್.ರಾಜನ್ ರವರು ಉದ್ಘಾಟನೆಯನ್ನು ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಆರ್ಯನ್ ಹೈಸ್ಕೂಲ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಶ್ರೀ.ಕೆ.ನರಸಿಂಹಮೂರ್ತಿ ವಹಿಸುವರು.
            ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಶ್ರೀ.ಎಸ್.ಪಿ.ಮುದ್ದಹನುಮೇಗೌಡ ರವರು, ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ .ಜಿ. ಬಿ. ಜ್ಯೋತಿಗಣೇಶ್ ರವರು, ಡಿ. ಎಸ್. ಇ. ಆರ್. ಟಿ. ನಿರ್ದೇಶಕರಾದ ಶ್ರೀ. ಹೆಚ್. ಎನ್. ಗೋಪಾಲಕೃಷ್ಣ ರವರು, ತುಮಕೂರು (ದ) ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ. ಕೆ. ಮಂಜುನಾಥ್‍ರವರು ಹಾಗೂ ತುಮಕೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ರಂಗಧಾಮಪ್ಪ ರವರು ಆಗಮಿಸುವರು.
               ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ. ಹೆಚ್. ಎನ್. ಚಂದ್ರಶೇಖರ್, ಗೌ || ಕಾರ್ಯದರ್ಶಿಗಳಾದ ಶ್ರೀ. ಆರ್. ಎನ್. ಸತ್ಯನಾರಾಯಣ, ಮುಖ್ಯಶಿಕ್ಷಕರಾದ ಶ್ರೀ. ಹೆಚ್. ಎಸ್. ರಾಘವೇಂದ್ರ ಇವರುಗಳು ಉಪಸ್ಥಿತಿ ವಹಿಸುವರು.

Recent Articles

spot_img

Related Stories

Share via
Copy link