ಪಾಲಿಕೆಯಲ್ಲಿ `ಪತಿರಾಯ’ನ ಆವಾಜ್!

ತುಮಕೂರು
           ತುಮಕೂರು ಮಹಾನಗರ ಪಾಲಿಕೆಯ ಚುನಾವಣೆ ಫಲಿತಾಂಶ ಬಂದು ಇನ್ನೂ ಬೆರಳೆಣಿಕೆಯ ದಿನಗಳಾಗುವಷ್ಟರಲ್ಲೇ “ಪತಿರಾಯ“(ಮಹಿಳಾ ಕಾರ್ಪೊರೇಟರ್ ಒಬ್ಬರ ಪತಿ)ರೊಬ್ಬರು ಪಾಲಿಕೆ ಕಚೇರಿಗೆ ಬಂದು ಅಧಿಕಾರಿಗಳೊಂದಿಗೆ “ಆವಾಜ್” ಹಾಕಿದ್ದಾರೆಂಬ ಸುದ್ದಿಯೊಂದು ಪಾಲಿಕೆ ಕಚೇರಿಯಲ್ಲಿ ಹರಿದಾಡತೊಡಗಿದೆ.
           “ಪಾಲಿಕೆ ಕಚೇರಿಗೆ ಇತರೆ ಕಾರ್ಪೊರೇಟರ್‍ಗಳೊಂದಿಗೆ ಈ “ಪತಿರಾಯ” ಸಹ ಆಗಮಿಸಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಆ ಕಾಪೆರ್Çರೇಟರ್‍ಗಳು ಮಾತನಾಡುವಾಗ “ಪತಿರಾಯ” ಸಹ  ಬಾಯಿ ಹಾಕಿದ್ದಾರೆ. “ನಾವು ಈಗಷ್ಟೇ ಗೆದ್ದುಬಂದಿದ್ದೇವೆ. ನಮ್ಮ ವಾರ್ಡ್‍ನಲ್ಲಿ ಬದಲಾವಣೆ ಮಾಡಬಾರದು..” ಎನ್ನುತ್ತ ಏರಿದ ದನಿಯಲ್ಲಿ ಮಾತನಾಡಿದ್ದಾರೆ. ಆಗ ಈ ಅಧಿಕಾರಿ “ನೀವು ಯಾರು?” ಎಂದು ಪ್ರಶ್ನಿಸಿದಾಗ, ಆತ ನೇರವಾಗಿ “ನಾನು ಕಾರ್ಪೊರೇಟರ್“ ಎಂದೇ ಆವಾಜ್ ಹಾಕಿದ್ದಾರೆ. ಆಗ ಸದರಿ ಅಧಿಕಾರಿ ಸಂದೇಹಗೊಂಡು ಸದರಿ ವಾರ್ಡ್ ಕಾರ್ಪೊರೇಟರ್ ಪಟ್ಟಿ ಪರಿಶೀಲಿಸಿದಾಗ ಅಲ್ಲಿ ಮಹಿಳೆ ಹೆಸರು ಕಂಡುಬಂದಿದ್ದು, ಆಗ ಅಧಿಕಾರಿಯೇ ಬೆಚ್ಚಿಬೀಳುವಂತಾಯಿತು” ಎಂಬುದು ಪಾಲಿಕೆಯ ತುಂಬ ಹರಿದಾಡುತ್ತಿರುವ ಸುದ್ದಿಯಾಗಿದೆ.
“ಈ ರೀತಿ `ಪತಿರಾಯ’ ತಾನೇ ಕಾರ್ಪೊರೇಟರ್ ಎಂದು ಹೇಳಿಕೊಳ್ಳುವುದು ಕಾನೂನು ಬಾಹಿರವಾಗುತ್ತದೆ. ಆತ ಏನಿದ್ದರೂ ಇಂಥ ವಾರ್ಡ್‍ನ ಮಹಿಳಾ ಕಾರ್ಪೊರೇಟರ್ ರವರ ಪತಿ ಎಂದು ಪರಿಚಯಿಸಿಕೊಳ್ಳಬಹುದಷ್ಟೇ” ಎಂದು ಹೋರಾಟಗಾರರು ಹೇಳುತ್ತಿದ್ದಾರೆ.

Recent Articles

spot_img

Related Stories

Share via
Copy link