ಹಾವೇರಿ:
ಹಾವೇರಿ ಜಿಲ್ಲೆಯಾದ್ಯಂತ ಗಣೇಶ ಉತ್ಸವ ನಿಮಿತ್ತ ಪಟಾಕಿಗಳನ್ನು ಮಾರಾಟಮಾಡಲು ಸ್ಥಳ ನಿಗದಿಪಡಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್ ಅವರು ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 13 ರಿಂದ 23 ರವರೆಗೆ ಗಣೇಶ ಚತುರ್ಥಿ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕೇಂದ್ರ ಸ್ಥಳಗಳಲ್ಲಿ ಹೆಚ್ಚಿನ ದಟ್ಟಣೆಯುಂಟಾಗುವುದರಿಂದ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹಾವೇರಿ-ಮುನ್ಸಿಪಲ್ ಹೈಸ್ಕೂಲ್ ಮೈದಾನ, ಬ್ಯಾಡಗಿ-ತಾಲೂಕು ಕ್ರೀಡಾಂಗಣ, ರಾಣೇಬೆನ್ನೂರು- ತಾಲೂಕು ಕ್ರೀಡಾಂಗಣ, ಹಿರೇಕೆರೂರು-ಸಾರ್ವಜನಿಕ ಸ್ಥಳ ಸರ್ವಜ್ಞ ಕಲಾಭವನ ಹತ್ತಿರ, ಶಿಗ್ಗಾಂವ- ಸಂತೆ ಮೈದಾನ, ಸವಣೂರು-ಭರಮದೇವರ ಗ್ರೌಂಡ್ ಹಾಗೂ ಹಾನಗಲ್‍ನ ಕುಂಬಾರಗುಂಡಿ ಬಯಲು ಜಾಗೆಯಲ್ಲಿ ಮದ್ದು ಮಾರಾಟಕ್ಕೆ ಸ್ಥಳ ನಿಗಧಿ ಪಡಿಸಲಾಗಿದೆ.
ನಿಗದಿಪಡಿಸಿದ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡದೇ ಆದೇಶವನ್ನು ಉಲ್ಲಂಘಿಸಿದರೆ ಲೈಸನ್ಸ್‍ದಾರರ ಮೇಲೆ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದೆಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.