ರಾಜೀವ ಗಾಂಧಿ ಸೇವಾ ಕೇಂದ್ರ,ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಪಶುಚಿಕಿತ್ಸಾಲಯ ಕೇಂದ್ರ ಉದ್ಘಾಟನೆ

 ಯಲಗಚ್ಚ

             ಯಲಗಚ್ಚ ಗ್ರಾಮ ಪಂಚಾಯತಿಯ ಯಲಗಚ್ಚ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜೀವ ಗಾಂಧಿ ಸೇವಾ ಕೇಂದ್ರ,ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಪಶುಚಿಕಿತ್ಸಾಲಯ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಮಾನ್ಯ ಶಾಸಕರಾದ ನೇಹರು  ಓಲೇಕಾರವರು ಉದ್ಯೋಗ ಖಾತರಿ ಯೋಜನೆಯಡಿ ರಾಜೀವ ಗಾಂಧಿ ಸೇವಾ ಕೇಂದ್ರಕ್ಕೆ 18.23 ಲಕ್ಷ ,ಅಂಗನಾವಾಡಿ ಕಟ್ಟಡಕ್ಕೆ 8.00 ಲಕ್ಷ ಮತ್ತು ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರಕ್ಕೆ 36.00 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಗ್ರಾಮ ಪಂಚಾಯತ ಅಭಿವೃದ್ದಿಗೆ ಪೂರಕವಾಗಿದೆ ಎಂದು ತಿಳಿಸಿದರು. ಹಾಗೆಯೇ ಮುಂದುವರೆದು ಈ ಕೆಳಗಿನ ಕಾಮಗಾರಿಗಳಿಗೆ ಮೊದಲ ಆದ್ಯತೆಗಳನ್ನು ನಿಡಬೇಕೆಂದು ತಿಳಿಸಿದರು.ಅವುಗಳೆಂದರೆ ವೈಯಕ್ತಿಕ ಕಾಮಗಾರಿಗಳಾದ 1) ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ) ಮಾವು/ಸಪೋಟ, ದಾಳಿಂಬೆ, ಪೇರಲ, ದ್ರಾಕ್ಷಿ, ತಾಳೆ, ದಾಲ್‍ಚಿನ್ನಿ, ಲವಂಗ, ಮೆಣಸು, ನಿಂಬೆ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ, ನಲ್ಲಿ ಇನ್ನು ಹಲವಾರು ಬೆಳೆಗಳು) 2) ರೇಷ್ಮೆ ಇಲಾಖೆಯ ಕಾಮಗಾರಿಗಳು 3) ಅರಣ್ಯ ಇಲಾಖೆಯ ಕಾಮಗಾರಿಗಳು4) ಕೃಷಿ ಅರಣ್ಯ ಕಾಮಗಾರಿಗಳು 5) ಕೃಷಿ ಹೊಂಡ 6) ಕಾಂಪೋಸ್ಟ್ ಪಿಟ್ 7) ಪ್ಯಾಕೇಜ್ ಕಾಮಗಾರಿಗಳು8) ಇಂಗು ಗುಂಡಿ 9) ಕೊಳುವೆ ಬಾವಿ ಮರಪೂರಣ ಘಟಕ 10) ಭೂ ಅಭಿವೃದ್ದಿ 11) ದನದದೊಡ್ಡಿ 12) ಉಳ್ಳಾಗಡ್ಡಿ ಗೋದಾಮು. 13) ಬೋಲ್ಡರ್ ಚೆಕ್ ಡ್ಯಾಂಗಳು 14) ಕಲ್ಲು/ಕಾಂಕ್ರೀಟ್ ಚೆಕ್ ಡ್ಯಾಂ 15) ಜಮೀನು ಸುತ್ತಲು ತೋಟಗಾರಿಕಾ ಸಸಿಗಳ ನಡುವುದು ಕಾಮಗಾರಿಗಳನ್ನು ಸದುಪಯೋಗ ಪಡಿಸಕೊಳ್ಳಬೇಕೆಂದು ,ಮಾನ್ಯ ಶಾಸಕರು ತಿಳಿಸದರು.
ತಾಲೂಕಾ ಪಂಚಾಯತಿಯ ಕಾರ್ಯಾನಿರ್ವಾಹಕ ಅಧಿಕಾರಿಗಳಾದ ಡಾ||ಪಿ ಎನ್ ಹುಬ್ಬಳ್ಳಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಈ ಕೆಳಗಿನಂತೆ ತೆಗೆದುಕೊಳ್ಳಬಹುದೆಂದು ತಿಳಿಸಿದರು ಅವುಗಳೆಂದರೆ, 1)ಕೆರೆ ಹೂಳೆತ್ತುವುದು 2) ಗೋ ಕಟ್ಟೆ ನಿರ್ಮಾಣ 3) ಹೊಸ ಕೆರೆ ನಿರ್ಮಾಣ 3) ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು 4) ಮಣ್ಣುಗಾಲುವೆ ನಿರ್ಮಾಣ 5) ಮಲ್ಟಿ ಆರ್ಚ ಚೆಕ್ ಡ್ಯಾಂ 6) ಗ್ರಾಮೀಣ ಗೋದಾಮು 7) ಸ್ಮಶಾನ ಅಭಿವೃದ್ದಿ 8) ಎಸ್.ಹೆಚ್.ಜಿ ಭವನ 9) ಸರ್ಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ದಿ 10) ಸರ್ಕಾರಿ ಶಾಲೆಗಳಿಗೆ ಕಂಪೌಂಡ್ ನಿರ್ಮಾಣ 11) ಬೌಲ್ಡರ್ ಚೆಕ್ಸ್ 12) ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ 13) ಅಂಗನವಾಡಿ ಕಟ್ಟಡಗಳು. 14) ಸರ್ಕಾರ ದಿಂದ ಆಯ್ದ ಶಾಲೆಗಳಿಗೆ ಶೌಚಾಲಯ ನಿರ್ಮಾಣ. 15) ಸಮುದಾಯ ದನದ ದೊಡ್ಡಿ ನಿರ್ಮಾಣ 16) ರೈತರ ಒಕ್ಕಣಿ ಕಣ 17) ಜಾಗದ ಲಭ್ಯತೆ ಇರುವ ಸರ್ಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ. (ಕನಿಷ್ಠ ತಾಲೂಕಿಗೆ 100 ಶಾಲೆಗಳಲ್ಲಿ)ಈ ಮೇಲೆ ತೋರಿಸಿದ ವೈಯಕ್ತಿಕ ಅಥವಾ ಸಮುದಾಯ ಕಾಮಗಾರಿಗಳನ್ನು ಹೊರತುಪಡಿಸಿ ಅವಶ್ಯಕತೆ ಇದ್ದಲ್ಲಿ ಸರ್ಕಾರದ ಅನುಮೋದಿತ ಕಾಮಗಾರಿಗಳ ಪಟ್ಟಿಯಲ್ಲಿ (260) ಇರತಕ್ಕ ಕಾಮಗಾರಿಗಳನ್ನು ಕೈಗೊಳ್ಳುಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕಾ ಪಂಚಾಯತಿಯ ಸದಸ್ಯರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು ಬಾಗವಹಿಸಿದ್ದರು ಹಾಗೂ ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಸೋಮಶೇಖರ ಜಿ ಯರೇಶಿಮಿ ನಿರೂಪಿಸಿದರು ಮತ್ತು ಮಾಹಿತಿ ಶಿಕ್ಷಣ ಸಂವಹನ ಅಧಿಕಾರಿ ಶ್ರೀ ಗಿರೀಶ ಎಸ್ ಬೆನ್ನೂರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Recent Articles

spot_img

Related Stories

Share via
Copy link