ಫಲಿತಾಂಶ ಸುಧಾರಣೆಯಲ್ಲಿ ಗಣಿತ ಮತ್ತು ವಿಙ್ಞನ ಶಿಕ್ಷರ ಪಾತ್ರ ದೊಡ್ಡದು ಕ್ಷೇತ್ರ ಶಿಕ್ಷಣಾಧೀಕಾರಿ ಯು.ಬಸವರಾಜಪ್ಪ

ರಟ್ಟೀಹಳ್ಳಿ:

             ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಗ್ರಾಮೀಣ ಭಾಗದ ವಿದ್ಯಾಥಿಗಳು ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಶಿಕ್ಷಕರು ಶ್ರಮವಹಿಸಿ ಕೆಲಸಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧೀಕಾರಿ ಯು.ಬಸವರಜಪ್ಪ ತಿಳಿಸಿದರು.
ತಾಲೂಕಿನ ನೆಸ್ವಿ ಗ್ರಾಮದ ಸರಕರಿ ಪ್ರೌಢ ಶಾಲೆಯಲ್ಲಿ ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿನ ಗಣಿತ ಹಾಗೂ ವಿಙ್ಞನ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗರ ಉಧ್ಘಾಟಿಸಿ ಮಾತನಾಡಿದರು.ಅವರು ಮುಂದುವರೆದು ಮಾತನಾಡುತ್ತಾ ಶಿಕ್ಷಕರು ಭೋಧನೆಯಲ್ಲಿ ಆಸಕ್ತಿ ಕಳೆದುಕೊಳ್ಳದೇ ವಿದ್ಯಾರ್ಥಿಗಳ ಮನಮುಟ್ಟುವಂತೆ ಕಲಿಸಬೇಕೆಂದರು.ಪ್ರೌಢಶಾಲಾ ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರಿತಿಸಿ,ಅವರಿಗೆ ಬೆನ್ನುತಟ್ಟಿ ಪ್ರೊತ್ಸಾಹಿಸಬೇಕೆಂದರು.ಬರುವ ಮಾರ್ಚ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಫಲಿತಾಂಶವನ್ನು ಉತ್ತಮ ಪಡಿಸುವ ಜವಬ್ದಾರಿ ತಮ್ಮಗಳ ಮೇಲೆ ಇದೆ ಎಂದರು.ಅದ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಕೆ.ಎನ್.ಹಂಚೀನ ಮಾತನಾಡಿ ಶಿಕ್ಷಣ ನಿಂತ ನೀರಲ್ಲ ಪ್ರತಿನಿತ್ಯವೂ ಹೊಸದನ್ನು ಕಲಿಸುವುದಕ್ಕೆ ಇಂತಹ ಕಾರ್ಯಾಗಾರಗಳು ಶಿಕ್ಷಕರಿಗೆ ತುಂಬಾ ಸಹಯಕವಗುತ್ತವೆ ಆದ್ದರಿಂದ ಶಿಕ್ಷಕರು ಇದರ ಸದುಪಯೋಗ ಮಾಡಿಕೊಂಡು ತರಗತಿಯಲ್ಲಿ ಉತ್ತಮ ಬೋಧನೆ ಮಾಡಬೇಕು ಎಂದರು.
       ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದಾನಪ್ಪ.ಬಣಕಾರ,ಸದಸ್ಯ ಸೋಮಶೇಖರಪ್ಪ.ಬೊಮ್ಮಣ್ಣನವರ , ಶಿವನಗೌಡ.ಬಸನಗೌಡ್ರ .ಮುಖ್ಯ ಶಿಕ್ಷಕರಾದ ವಿ.ಎಸ್.ಕೊಪ್ಪದ ,ಶಿಕ್ಷಕರಾದ ವಿ.ಎನ್.ಪಾಟೀಲ ,ಸಿ.ಬಿ.ಚಂದ್ರಕೇರ ,ಸದಾಶಿವ.ಎಮ್.ಹೆಚ್ ,ಬಸವರಾಜ.ಉಪ್ಪಾರ, ಎಂ.ಎಂ.ಕೆರೂರ,ಎನ್.ಕೆ.ಹಾಲಭಾವಿ ,ಸುರೇಶ.ಗಿಡ್ಡಪ್ಪಳವರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಆಣೂರಶೇಟ್ಟರ,ವೈ.ಪಿ ಜಗಳೂರ ಇದ್ದರು.

Recent Articles

spot_img

Related Stories

Share via
Copy link