ಹಾವೇರಿ :
ನಗರದ ತಾಲೂಕ ಪಂಚಾಯತಿ ಮುಂದೆ ಹಾವನೂರ ಗ್ರಾಮ ಪಂಚಾಯತಿ ಪಿಡಿಓ ಶ್ರೀಮತಿ ಸುನಿತಾ ಗರಡಿ ಅವರ ವರ್ಗಾವಣೆಯನ್ನು ವಿರೋಧಿಸಿ ಅವರನ್ನು ಮತ್ತೆ ಅದೇ ಸ್ಥಳದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡುವಂತೆ ಒತ್ತಾಯಿಸಿ ಹಾವನೂರ ಗ್ರಾ ಪಂ ಪದಧಿಕಾರಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ನೇಹ ಬಳಗ ತಾಲೂಕ ಘಟಕದ ವತಿಯಿಂದ ಪ್ರತಿಭಟಿಸಿ ತಾಲೂಕ ಪಂಚಾಯತಿ ಮ್ಯಾನೇಜರ ರಮೇಶ ಅಕ್ಕಿಯವರ ಮೂಲಕ ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ ಪಂ ಉಪಾಧ್ಯಕ್ಷ ಸುರೇಶ ಅಳ್ಳಳ್ಳಿ ನಮ್ಮ ಪಂಚಾಯತಿಗೆ ಪಿಡಿಓ ಶ್ರೀಮತಿ ಸುನಿತಾ ಗರಡಿ 2 ವರ್ಷಗಳಿಂದೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಉತ್ತಮ ಕೆಲಸ ಮಾಡಿಸಿದ್ದಾರೆ.
ಇಂತಹ ಅಭಿವೃದ್ಧಿಪರ ಕೆಲಸ ಮಾಡುವ ಅಧಿಕಾರಿಗಳು ಬೇಕಾಗಿದವರನ್ನು ಕಂಚರಗಟ್ಟಿ ಗ್ರಾ ಪಂ ಗೆ ವರ್ಗಾಹಿಸದೇ ಗ್ರಾಮದ ಪ್ರಗತಿಯ ಹಿತದೃಷ್ಠಿಯಿಂದ ಹಾಗೂ ಉತ್ತಮ ಆಡಳಿತಕ್ಕಾಗಿ ಮತ್ತೆ ಅವರನ್ನು ಇಲ್ಲೆ ಮುಂದುವರಿಯುವಂತೆ ಮಾಡಬೇಕು ಎಂದು ಹೇಳಿದರು. ಕರವೇ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಾವಿ ಮಾತನಾಡಿ ಉತ್ತಮ ಆಡಳಿತ ಮಾಡುವ ಪಿಡಿಓ ಶ್ರೀಮತಿ ಸುನಿತಾ ಗರಡಿಯವರನ್ನು ಹಾವನೂರ ಗ್ರಾ ಪಂ ಜನರ ಹಿತಾಸಕ್ತಿಗೆ ಅನುಗುಣವಾಗಿ ಅವರನ್ನು ಬೇರೆ ಕಡೆ ವರ್ಗಾಹಿಸದೇ ಮೂಲ ಸ್ಥಳಕ್ಕೆ ಅವರನ್ನು ನಿಯೋಜಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಹಾವನೂರ ಗ್ರಾ ಪಂ ಅಧ್ಯಕ್ಷರಾದ ಗಿರಿಜವ್ವ ಕೆಂಗನಿಂಗಪ್ಪನವರ. ಸದಸ್ಯರುಗಳಾದ ಗೋಪಾಲ ಬೆಣ್ಣಿ.ದಾದಾಪೀರ ಕಲ್ಲಾರಿ.ಪ್ರಕಾಶ ನೀರಲಗಿ.ನಿಂಗಪ್ಪ ಬನ್ನಿಮಟ್ಟಿ,ಮಹಿಳೆಯರು ಸೇರಿದಂತೆ ಊರಿನ ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.