ಹಾನಗಲ್ಲ :
ಯುವಕರಿಗೆ ಕ್ರೀಡಾಬಿಮಾನವನ್ನು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಶನಿವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಆಟಗಳಿಗೆ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸು ಶಾಂತಿಗಾಗಿ ಕ್ರೀಡೆ ಬೇಕು. ಕೇವಕಲ ಬಹುಮಾನ ಗೆಲ್ಲಲು ಅಲ್ಲ. ಇಂದಿನ ಯುವಕರು ಆರೋಗ್ಯದತ್ತ ನಿರ್ಲಕ್ಷ ತೋರುತ್ತಿರುವುದು ವಿಷಾದದ ಸಂಗತಿ. ದಿನದ ಒಂದಷ್ಟು ಅವಧಿಯನ್ನು ಆರೋಗ್ಯಕ್ಕಾಗಿ ಮೀಸಲಾಗಿಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಕ್ರೀಡಾ ಪ್ರೌಢಮೆ ಕೆಲವರಲ್ಲಿರುತ್ತದೆ. ಹಾನಗಲ್ಲಿನ ಕ್ರೀಡಂಗಣದಲ್ಲಿ ಇರುವ ಈಜುಗೊಳವನ್ನು ಗುತ್ತಿಗೆ ಮೇಲೆ ನೀಡಿ ಅದು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ ಜರುಗಿಸಲಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಖಾರಿ ಎಚ್.ಶ್ರೀನಿವಾಸ, ಕ್ಷೇತ್ರ ಸಮನ್ವಯಾಧಿಕಾರಿ, ಬಿ.ಡಂ.ಬೇವಿನಮರದ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಬಿ.ಉಪಾಸಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶೇಕೆ ಹಂಚಿನಮನಿ, ಕ್ರೀಡಾಕೂಟದ ನೋಡಲ್ ಅಧಿಕಾರಿಗಳಾದ ಜಿ.ಎಂ.ಪಂಚಾಳ, ಪಿ.ಜಿ. ಚಿಕ್ಕಾಂಸಿ ಸಂತೋಷ ದೊಡ್ಡಮನಿ, ಜಿ.ಸಿ.ಕಾಳಂಗಿ. ಶಿವಲಿಂಗಪ್ಪ ತಲ್ಲೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.