ಹಗರಿಬೊಮ್ಮನಹಳ್ಳಿ:
ತಾಲೂಕಿನ ತಂಬ್ರಹಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 125ನೇ ಶಿಕಾಗೋ ಭಾಷಣ ಕಾರ್ಯಕ್ರಮ ಬುಧವಾರ ಜರುಗಿತು.
ಶಾಲೆಯ ಮುಖ್ಯ ಶಿಕ್ಷಕ ರೆಡ್ಡಿನಾಯ್ಕ್ ಕಾರ್ಯಕ್ರಮ ಕುರಿತು ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳು ಯುವಕರಲ್ಲಿ ಕಾಣಬೇಕು. ಆಗ ಮಾತ್ರ ದೇಶ ಪ್ರಗತಿಯತ್ತ ಸಾಗಲು ಸಾಧ್ಯವೆಂದರು. ಏಳಿ ಎದ್ದೇಳಿ ಎಚ್ಚರಗೊಳ್ಳಿ ಗುರುಮುಟ್ಟುವವರೆಗೂ ನಿಲ್ಲದಿರಿ ಎಂದು ಅಂದು ಅವರೇಳೀದ ಮಾತು ಯುವಜನತೆಗೆ ಇಂದಿಗೂ ಪ್ರಸ್ತುತವಾಗಿದೆ. 1893ರಲ್ಲಿ ಅಮೇರಿಕದ ಶಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣ ಪ್ರಪಂಚವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದರು. ಅಂತಹ ಆಕರ್ಷಕ ಶಕ್ತಿ ಅವರಲ್ಲಿತ್ತು. ಅವರು ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿದ್ದು ಮಹಾನ್ ವ್ಯಕ್ತಿಗಳ ಆದರ್ಶ ತತ್ವಗಳನ್ನು ಯುವಕರು ಮೈಗೂಡಿಕೊಳಲಿ ಎಂದರು.
ಶಾಲೆಯ ವಿದ್ಯಾರ್ಥಿಗಳಲ್ಲಿ ಮಹಮ್ಮದ್ ಅಸನ್, ಕೆ.ಸೃಷ್ಠಿ ಸ್ವಾಮಿ ವಿವೇಕಾನಂದರ ವೇಷಧಾರಿಗಳಾಗಿ ಪಾಲಕರನ್ನು ಆಕರ್ಷಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಮಹಮ್ಮದ್ ರಫಿ, ಸದಸ್ಯರಾದ ಅಜೀಜ್, ಶಿಕ್ಷಕಿಯರಾದ ಸಮಿಉನ್ನೀಸಾ, ಹೊಸಮನಿ ಅಶ್ವಿನಿ, ಇಮ್ರಾನ್ ಮೆಹೆತಜ್ ಹಾಗೂ ಸಿಬ್ಬಂದಿಯವರಿದ್ದರು.