ನವದೆಹಲಿ:
ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಬುಧವಾರ ಅಂತರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.ಕಳೆದ ಹನ್ನೆರಡು ವರ್ಷಗಳಿಂದ ನಾನು ಸಾಕಷ್ಟು ಆಟವಾಡಿದ್ದೇನೆ, ಇತ್ತೀಚೆಗೆ ಮುಗಿದ ಏಷ್ಯನ್ ಗೇಮ್ಸ್ ನಲ್ಲಿ ತಂಡ ಚಿನ್ನದ ಪದಕ ಗಳಿಸುವಲ್ಲಿ ವಿಫಲವಾಗಿದ್ದು ಕಂಚಿನ ಪದಕದೊಂದಿದೆ ಮರಳಿದ ಬಳಿಕ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸರ್ದಾರ್ ಹೇಳಿದ್ದಾರೆ.”ಕಳೆದ , 12 ವರ್ಷಗಳಲ್ಲಿ ಸಾಕಷ್ಟು ಹಾಕಿ ಆಡಿದ್ದು ನಾನೀಗ ಅಂತರಾಷ್ಟ್ರೀಯ ಹಾಕಿನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ, ಇದು ಭವಿಷ್ಯದ ಜನಾಂಗ ರೂಪುಗೊಳ್ಳುವ ಸಮಯವಿದು” ಅವರು ಹೇಳಿದ್ದಾರೆ.
“ಚಂಡೀಘರದಲ್ಲಿರುವ ನನ್ನ ಕುಟುಂಬ, ಸ್ನೇಹಿತರು ಹಾಗೂ ಹಾಕಿ ಇಂಡಿಯಾದೊಡನೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದು ಸರಿಯಾದ ಸಮಯ ಎಂದು ನನಗನ್ನಿಸಿದೆ.ಮುಂದೆ ಹಾಕಿಗೆ ಮೀರಿದ ಜೀವನವನ್ನು ಕಾಣಬೇಕಿದೆ”2006ರಲ್ಲಿ ಸರ್ದಾರ್ ಪಾಕ್ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಹಾಕಿಗೆ ಪಾದಾರ್ಪಣೆ ಮಾಡಿದ್ದರು. ಇವರು ಒಟ್ಟಾರೆ 350 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು ಎಂಟು ವರ್ಷಗಳ ಕಾಲ ರಾಷ್ಟ್ರೀಯ ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 2008 ರಿಂದ 2016 ವರೆಗೆ ಸರ್ದಾರ್ ಭಾರತ ಪುರುಷರ ತಂಡದ ನಾಯಕರಾಗಿದ್ದರು.2012 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2015 ರಲ್ಲಿ ಪದ್ಮಶ್ರೀ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು.2008 ರ ಸುಲ್ತಾನ್ ಅಜ್ಲಾನ್ ಷಾ ಕಪ್ನಲ್ಲಿ ತಂಡವನ್ನು ಮುನ್ನಡೆಸಿದ್ದ ಸರ್ದಾರ್ ತಂಡದ ನಾಯಕತ್ವ ವಹಿಸಿದ್ದ ಅತ್ಯಂತ ಕಿರಿಯ ಆಟಗಾರರೆನಿಸಿದ್ದರು. ಇವರು ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಮುನ್ನೆಡೆಸಿದ್ದರು