ರಾಹುಲ್ ದ್ರಾವಿಡ್ ರಿಂದ ಮಣಿಪಾಲ ಆರೋಗ್ಯಕಾರ್ಡ್ ಬಿಡುಗಡೆ!!

0
29

 ಮಂಗಳೂರು :

      ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಆರೋಗ್ಯ ಕಾರ್ಡ್ ನ ಬಿಡುಗಡೆ ಮಾಡಿದರು.

      ಮಣಿಪಾಲ ಆಸ್ಪತ್ರೆ ಸಮೂಹವು ಪ್ರತಿವರ್ಷವೂ ವಿತರಣೆ ಮಾಡುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ ನ ಬಿಡುಗಡೆ ಸಮಾರಂಭ ಮಂಗಳವಾರದಂದು ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ ನಡೆಯಿತು.

      ಆರೋಗ್ಯ ಕಾರ್ಡ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ರಾಹುಲ್ ದ್ರಾವಿಡ್ , ಮಣಿಪಾಲ ಆರೋಗ್ಯ ಕಾರ್ಡ್ ಜನ ಸಮುದಾಯದ ಸೇವೆಗೆ ಸದ್ಬಳಕೆಯಾಗುತ್ತಿರುವದು ಸಂತಸದ ವಿಚಾರ. ಇದರ ಸದುಪಯೋಗ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು. ಮಣಿಪಾಲ ಆರೋಗ್ಯ ಕಾರ್ಡ್ ನ ರಾಯಭಾರಿಯಾಗಿ ಸೇವೆ ಸಲ್ಲಿಸಲು ತನಗೆ ಹೆಮ್ಮೆ ಅನಿಸುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.

      ಸಮಾರಂಭದಲ್ಲಿ ಮಣಿಪಾಲ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಎಚ್. ಸುದರ್ಶನ್ ಬಳ್ಳಾಲ್, ಸಹ ಕುಲಪತಿ ಡಾ.ಎಚ್. ಎಸ್. ಬಳ್ಳಾಲ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here