ಲಾಹೋರ್:
ಶಂಕಿತ ಉಗ್ರ ಹಫೀಜ್ ಸಯ್ಯೀದ್ ನೇತೃತ್ವದ ಜಮಾತ್ ಉದ್ ದವಾ (ಜೆಯುಡಿ) ಸೇರಿದಂತೆ ಹಲವು ಸಂಘಟನೆಗಳ ಕಾರ್ಯಚಟುವಟಿಕೆ ಮುಂದುವರಿಕೆಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಮುಂಬೈ ದಾಳಿಯೂ ಸೇರಿದಂತೆ ಪಾಕಿಸ್ತಾನದಲ್ಲಿ ನಡೆದಿದ್ದ ವಿವಿಧ ಭಯೋತ್ಪಾದಕ ದಾಳಿಗಳಲ್ಲಿ ಹಫೀಜ್ ಸಯ್ಯೀದ್ ನ ಜೆಯುಡಿ ಹಸ್ತಕ್ಷೇಪ ಮತ್ತು ಉಗ್ರ ಚಟುವಟಿಕೆ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ಜೆಯುಡಿ, ಎಫ್ ಐಎಫ್ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಚಟುವಟಿಕೆ ಮೇಲೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಸಂಘಟನೆಗಳು ಲಾಹೋರ್ ಕೋರ್ಟ್ ಮೊರೆ ಹೋಗಿದ್ದವು. ಅದರಂತೆ ಲಾಹೋರ್ ಕೋರ್ಟ್ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಸಂಘಟನೆಗಳ ಕಾರ್ಯ ಚಟುವಟಿಕೆ ಮುಂದುವರಿಕೆಗೆ ಆದೇಶ ನೀಡಿತ್ತು.
ಈ ಹಿಂದೆ ನೀಡಿದ್ದ ಆದೇಶ ಪ್ರಶ್ನಿಸಿ ಪಾಕಿಸ್ತಾನ ಕೋರ್ಟ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇಂದು ಈ ಪ್ರಕರಣದ ತೀರ್ಪು ನೀಡಿರುವ ಪಾಕಿಸ್ತಾನ ಸುಪ್ರೀಂ ಕೋರ್ಟ್ ಜೆಯುಡಿ ಮತ್ತು ಎಫ್ ಐಎಫ್ ಸಂಘಟನೆಗಳ ಕಾರ್ಯಚಟುವಟಿಕರೆ ಮುಂದುವರಿಕೆಗೆ ಆದೇಶ ನೀಡಿದೆ. ಆ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.
ಸುಪ್ರೀಂ ಆದೇಶ ಹೊರ ಬೀಳುತ್ತಿದ್ದಂತೆಯೇ ಸಂತಸ ವ್ಯಕ್ತಪಡಿಸಿರುವ ಜೆಯುಡಿ ಸಂಘಟನೆ, ಇದು ನ್ಯಾಯಕ್ಕೆ ಸಿಕ್ಕ ಗೆಲುವಾಗಿದ್ದು. ಸಂಘಟನೆ ಅಡಿಯಲ್ಲಿ 300 ಮದರಸಾಗಳು, ಶಾಲೆಗಳು, ಆಸ್ಪತ್ರೆಗಳು, ಮುದ್ರಣ ಸಂಸ್ಥೆ ಇದ್ಜು, ಪ್ರತ್ಯೇಕ ಆ್ಯಂಬುಲೆನ್ಸ್ ಸೇವೆ ಮತ್ತು 50 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಕೂಡ ಸೇವೆ ಮಾಡುತ್ತಿದ್ದಾರೆ. ಸರ್ಕಾರದ ಪಕ್ಷಪಾತ ಧೋರಣೆಯಿಂದಾಗಿ ಇವುಗಳ ಕಾರ್ಯ ನಿರ್ವಹಣೆ ಕಷ್ಟಕರವಾಗಿತ್ತು. ಇದೀಗ ಸುಪ್ರೀಂ ಆದೇಶ ತಮಗೆ ಆನೆ ಬಲ ತಂದಿದೆ ಎಂದು ಜೆಯುಡಿ ವಕ್ತಾರರು ತಿಳಿಸಿದ್ದಾರೆ.
ಇದೇ ಉಗ್ರ ಹಫೀಜ್ ಸಯ್ಯೀದ್ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲೂ ರಾಜಕೀಯ ಪಕ್ಷವೊಂದರ ಬೆಂಬಲದೊಂದಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ರಾಜಕೀಯದಲ್ಲೂ ಹಸ್ತಕ್ಷೇಪ ಮಾಡಿದ್ದ.