ಸೆ.17ರಂದು ವಿಶ್ವಕರ್ಮ ಜಯಂತ್ಯುತ್ಸವ, ಹಿರಿಯ ನಾಗರೀಕ, ಕೌಶಲ್ಯಾಧಾರಿತ ಮಹಿಳೆಯರಿಗೆ ಸನ್ಮಾನ,

ಕಂಪ್ಲಿ:

          ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ಕಂಪ್ಲಿಯ ನಗರ ಘಟಕದಿಂದ ಸೆ.17ರಂದು, ಬೆಳಿಗ್ಗೆ 9ಗಂಟೆಗೆ ಕಂಪ್ಲಿಯ ಪುರಸಭಾಂಗಣದಲ್ಲಿ, ವಿಶ್ವಕರ್ಮ ಜಯಂತ್ಯುತ್ಸವ ಸಮಾರಂಭ ಹಮ್ಮಿಕೊಂಡಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಮಂಜುನಾಥ ಪ್ರಕಟಿಸಿದ್ದಾರೆ.
           ಅವರು ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಶ್ಯಾಡಲಗೇರಿಯ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಏಕದಂಡಿ ಮಠದ ಜಗದ್ಗುರು ನಾಗೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಲಿದ್ದು, ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಲಿದ್ದಾರೆ. ಪುರಸಭೆ ಅಧ್ಯಕ್ಷ ಎಂ.ಸುಧೀರ್ ಅಧ್ಯಕ್ಷತೆವಹಿಸಲಿದ್ದಾರೆ. ತಹಶೀಲ್ದಾರ ಎಂ.ರೇಣುಕಾ, ಮುಖ್ಯಾಧಿಕಾರಿ ವೆಂಕಟೇಶ್, ಸಿಪಿಐ ಎಚ್.ದೊಡ್ಡಣ್ಣ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಬಳ್ಳಾರಿ ಜಿಲ್ಲಾ ನಾಮನಿರ್ದೇಶಕ ಎಂ.ಮಂಜುನಾಥ, ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾದ ಹೈ-ಕ ಪ್ರಧಾನ ಕಾರ್ಯದರ್ಶಿ ವೈದ್ಯಂ ಜಂಬುನಾಥ ಆಚಾರ್, ಕಂಪ್ಲಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ವೈ.ನಾಗಲಿಂಗ ಆಚಾರ್ ಸೇರಿ ಗಣ್ಯರು ಆಗಮಿಸಲಿದ್ದಾರೆ.
          ವಿಶ್ವಕರ್ಮ ಕುರಿತು ನಿಟ್ರುವಟ್ಟಿಯ ಎರಿಸ್ವಾಮಿ ಆಚಾರ್ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯ ನಾಗರೀಕರಿಗೆ ಹಾಗೂ ವೃತ್ತಿ ಕೌಶಲ್ಯಾಧಾರಿತ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಶ್ವಕರ್ಮ ಸಮುದಾಯದವರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಪುರಸಭಾಡಳಿತ ಮಂಡಳಿ ಸದಸ್ಯರು, ಜನಪ್ರತಿನಿಧಿಗಳು, ನಾಗರೀಕರು ಸಕಾಲಕ್ಕೆ ಪಾಲ್ಗೊಳ್ಳುವಂತೆ ಕೋರಿದ್ದಾರೆ.

Recent Articles

spot_img

Related Stories

Share via
Copy link