ಹಗರಿಬೊಮ್ಮನಹಳ್ಳಿ:
ಸತತ ಮೂರುವರ್ಷಗಳಿಂದ ಅದ್ದೂರಿಯಾಗಿ ಬಹಳ ವಿಜೃಂಬಣೆಯಿಂದ ನಮ್ಮ ಏಕದಂತ ಗ್ರೂಪ್ಸ್ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದೆ ಎಂದು ರಾಜ್ಯ ಕಾಂಗ್ರೆಸ್‍ನ ಎಸ್.ಟಿ.ಘಟಕದ ಉಪಾಧ್ಯಕ್ಷರಾದ ಪವಾಡಿ ಹನುಮಂತಪ್ಪ ಹೇಳಿದರು.
ಪಟ್ಟಣದ ಕೂಡ್ಲಿಗಿ ಸರ್ಕಲ್‍ನಲ್ಲಿ ಏಕದಂತ ಗ್ರೂಪ್ಸ್ ವತಿಯಿಂದ ಶ್ರೀ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಪ್ರತೀವರ್ಷವು ಒಬ್ಬ ಮುಸ್ಲೀಂ ಬಾಂಧವರು ಸ್ವ-ಇಚ್ಚೆಯಿಂದ ನಮ್ಮ ಸಂಘಕ್ಕೆ ಗಣೇಶನನ್ನು ಕೊಡಿಸುತ್ತಾ ಬಂದಿದ್ದಾರೆ ಅದೇರೀತಿ ಈ ವರ್ಷದ ಗಣೇಶನನ್ನು ಎಣ್ಣಿ ಇಬ್ರಾಹಿಂ ಸಾಹೇಬ್ ಮತ್ತು ಅವರ ಕುಟುಂಬ ವರ್ಗದವರು ಗಣೇಶ ಮೂರ್ತಿಗೆ ಪ್ರಾಯೋಜಕರಾಗಿದ್ದಾರೆ. ಏಕದಂತ ಗ್ರೂಪ್ಸ್‍ನಲ್ಲಿ ಸರ್ವ ಧರ್ಮೀಯ ಹುಡುಗರು ಸೇರಿ ಯಾವುದೇ ಬೇದ ಭಾವವಿಲ್ಲದೇ ಒಮ್ಮತದಿಂದ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಆದ್ದರಿಂದ ನಮ್ಮದು ಭಾವೈಕ್ಯತೆಯ ಸಂಗಮವಾಗಿದೆ. ವರ್ಷದಿಂದ ವರ್ಷಕ್ಕೆ ಸಂಘದಲ್ಲಿ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದು 9 ದಿನಗಳ ಕಾಲ ಶ್ರೀ ವಿನಾಯಕನನ್ನು ಪ್ರತಿಷ್ಠಾಪಿಸಿ ವಿವಿಧ ಜಾನಪದ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಇದೇ 20 ನೇ ತಾರೀಖು ಕೊಪ್ಪಳದ ಜೂನಿಯರ್ ಎಸ್.ಜಾನಕಿ ಎಂದೇ ಪ್ರಕ್ಯಾತಿಗಳಿಸಿರುವ ಗಂಗಮ್ಮನವರಿಂದ ಗೀತಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಇದರಲ್ಲಿ ಸಂಡೂರಿನ ಉಸೇನ್ ಭಾಷಾ, ಶಿವಪ್ರಕಾಶ್ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.
ಪಟ್ಟಣದಲ್ಲಿ ಹಲವು ಸಂಘಟನೆಗಳಿಂದ ವಿನಾಯಕ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಕೇವಲ 3 ವರ್ಷದಹಿಂದ ಆರಂಭವಾದ ನಮ್ಮ ಏಕದಂತ ಗ್ರೂಪ್ಸ್ ನಡೆಸಿಕೊಡುವ ವಿಭಿನ್ನ ಕಾರ್ಯಕ್ರಮಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಆದ್ದರಿಂದ ಈ ಸಂಘದಿಂದ ನಡೆಯುವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬರುತ್ತದೆ. ಈ ಬಾರಿ ಯಾವುದೇ ರೀತಿಯ ನೂಕುನುಗ್ಗಲಾಗದಂತೆ ಮುಂಜಾಗೃತಾ ಕ್ರಮವಾಗಿ ಸಂಘದ ಸದಸ್ಯರೆಲ್ಲಾ ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದಾರೆ. 9 ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ನಾಮ ನಿರ್ದೇಶಿತ ಸದಸ್ಯ ಡಿಶ್ ಮಂಜುನಾಥ, ಕಾಂಗ್ರೆಸ್ ಮುಖಂಡರಾದ ನೆಲ್ ಇಸ್ಮಾಯಿಲ್, ಸಂಘದ ಸದಸ್ಯರಾದ ಪವಾಡಿ ಪೃಥ್ವಿರಾಜ್, ವರೂಣ್ ಪಾಟೀಲ್, ರಾಘವೇಂದ್ರ, ಸುಬ್ರಮಣ್ಯ, ಶಿವಕುಮಾರ್ ಎಂ, ಯಮನೂರಸ್ವಾಮಿ, ರಜಾಕ್, ಕೀರ್ತಿ, ಕೊಟ್ರೇಶ್, ಮಾರುತಿ, ವಾಸು ಮತ್ತಿತರ ಸಂಘದ ಸದಸ್ಯರು ಉಪಸ್ಥಿತರಿದ್ದರು.