ಕಂಚಿಕೇರಿ ಗ್ರಾಮದಲ್ಲಿ ಮೃತ್ಯಂಜಯ ಹೋಮ

ಹರಪನಹಳ್ಳಿ:

              ಓಂದೇ ತಿಂಗಳಲ್ಲಿ 19 ಜನರು ವಿವಿಧ ಕಾರಣಗಳಿಂದ ಸಾವನ್ನಪ್ಪಿ ಭೀತಿಯಲ್ಲಿದ್ದ ತಾಲೂಕಿನ ಕಂಚಿಕೇರಿ ಗ್ರಾಮಕ್ಕೆ ಮತ್ತೆರಡು ಸಾವು ಸಂಭವಿಸಿ ಬೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.

               ಛಲವಾದಿ ರಂಗಪ್ಪ(63) ಅನೋರಾಗ್ಯದಿಂದ ಭಾನುವಾರ ಮದ್ಯಾಹ್ನ ನಿಧನರಾಗಿದ್ದರೆ, ಶನಿವಾರ ರಾತ್ರಿ ಕೆಂಚಪ್ಪ(68) ಎಂಬುವವರ ಸಾವನ್ನಪ್ಪಿದ್ದಾರೆ. ಒಂದೇ ತಿಂಗಳಲ್ಲಿ 19 ಜನರು ಗ್ರಾಮದಲ್ಲಿ ಸಾವನ್ನಪ್ಪಿದ್ದರಿಂದ ಭಯ ಗೊಂಡ ಗ್ರಾಮಸ್ಥರು ಜ್ಯೋತಿಷಿಗಳ ಸಲಹೆ ಮೇರೇಗೆ ಎರಡುಮೂರು ದಿನಗಳ ಕೆಳಗೆ ಮೃತ್ಯಂಜಯ ಹೋಮ ನಡೆಸಿದ್ದರು.

 ಈ ಘಟನೆ ಬಹಳಷ್ಟು ಸದ್ದು ಮಾಡಿತ್ತು, ಆದರೆ ಹೋಮ ಮಾಡಿದ ನಂತರವೂ ಸಾವು ಮುಂದುವರೆದಿದ್ದು, 19 ಜನರ ಸಾವಿಗೆ ಮತ್ತೆರೆಡು ಸೇರ್ಪಡೆಯಾಗಿ ಈಗ 21ಕ್ಕೆ ಬಂದು ನಿಂತಿದೆ. ಈಗ ಕಂಚಿಕೇರಿ ಗ್ರಾಮಸ್ಥರು ಇನ್ನಷ್ಠು ಭಯ ಭೀತರಾಗಿದ್ದಾರೆ.

Recent Articles

spot_img

Related Stories

Share via
Copy link