ಹಿರಿಯೂರು :
ಇಂದಿನ ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅರಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಅಂತಹ ಮಕ್ಕಳನ್ನು ನಮಾಜದ ಮುಖ್ಯವಾಹಿನಿಗೆ ತರಲು ಸಮಾಜದ ಪ್ರತಿಯೊಬ್ಬರು ಮುಂದಾಗಬೇಕೆಂದು ಮಾಜಿ ಸಚಿವರಾದ ಆರ್ ಕೃಷ್ಣಪ್ಪ, ಬೆಂಗಳೂರು ಇವರು ಕರೆ ನೀಡಿದರು
ಹಿರಿಯೂರಿನ ರೋಟರಿ ಸಭಾ ಭವನದಲ್ಲಿ ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರದಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ನಂತರ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಪುರಸ್ಕಾರ ಪಡೆದು ಸಮಾಜದ ಅಭಿವೃದ್ದಿಗೆ ಮುಂದಾಗಿ ತಮ್ಮಲ್ಲಿ ಆತ್ಮಸ್ಥೈರ್ಯ ಬೆಳಸಿಕೊಂಡು ದೇಶಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳಾದ ಅಂಬೇಡ್ಕರ್, ಮಹಾತ್ಮ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಕನಕದಾಸರ ಆದರ್ಶವನ್ನು ಮೈಗೂಡಿಸಿಕೊಂಡು ತಮ್ಮ ಗುರಿ ಸಾಧನೆಯ ಮೂಲಕ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಿ ಒಳ್ಳಯ ಸಂಸ್ಕಾರ ಮತ್ತು ಸಂಸ್ಕøತಿ ಬೆಳಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದರು.
ಶಶಿಕಲಾ ಸುರೇಶಬಾಬು ಜಿಲ್ಲಾ ಪಂಚಾಯಿತ್ ಸದಸ್ಯರು ಇವರು ಆಧುನಿಕ ಯುಗದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ ಸಮಾಜದ ಬೆಳವಣಿಗೆಗೆ ಶಿಕ್ಷಣ ಪೂರಕವಾದದ್ದು ಎಂದರು, ಪತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರು ಮಾನವಿಯ ಮೌಲ್ಯಗಳನ್ನು ಬೇಳಸಕೊಳ್ಳಬೇಕೆಂದರು.
ನಿಂಗಪ್ಪ ಮಾಜಿ ಅದ್ಯಕ್ಷರು ಕರ್ನಾಟಕ ಪ್ರಾದೇಶಿಕ ಕುರುಬ ಸಂಘ ಬೆಂಗಳೂರು, ನಗರಸಭೆ ಸದಸ್ಯರಾದ ಹೆಚ್ ನಟರಾಜ್ ಉಪನ್ಯಾಸಕರಾದ ರೇವಣ್ಣ ಸಿದ್ದಪ್ಪ, ಸಮಾರಂಭ ಕುರಿತು ಮಾತನಾಡಿದರು.ಸಮಾರಂಭದಲ್ಲಿ ಕರ್ನಾಟಕ ಪ್ರಾದೇಶಿಕ ಕುರುಬ ಸಂಘದ ನಿರ್ದೇಶಕರಾದ ಕಂದಿಕೆರೆ ಸುರೇಶ್ ಬಾಬು, ಡಾ|| ಶರಣಪ್ಪ ಜಂಗಂಡಿ ಕೃಷಿ ವಿಜ್ಞಾನಿಗಳು, ಎಮ್.ಮಂಜಣ್ಣ ಇಂಜಿನಿಯರ್, ಅದ್ಯಕ್ಷರಾದ ರಾಜಶೇಖರ್ ಕಲಮರಳ್ಳಿ, ಕಾರ್ಯದರ್ಶಿ ರಾಮಚಂದ್ರಪ, ಖಾಜಾಂಚಿ ಹರ್ತಿಕೋಟೆ ಮಹಾಸ್ವಾಮಿ, ಉಪಾಧ್ಯಕ್ಷರಾದ ಲೋಹಿತಾಶ್ವ, ಪ್ರಕಾಶ, ಕೆಂಚಲಿಂಗಪ್ಪ, ಪಿ ತಿಪ್ಪೇಸ್ವಾಮಿ, ಹಾಲೇಶ್, ಪಿ ಶ್ರೀನಿವಾಸ, ಸರೋಜಮ್ಮ, ಭಾರತಿ, ಕೆ.ಪಿ.ಟಿ.ಸಿ.ಎಲ್ ನೌಕರರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ಡಾ|| ರವಿ ಉಪನ್ಯಾಸಕರು ರಾಜ್ಯ ಪ್ರಶಸ್ತಿ ಪುರಸ್ಕತರು ಮತ್ತು ಪಿ.ತಿಪ್ಪೇಸ್ವಾಮಿ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತರಿಗೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ನವೋದಯ ಪ್ರತಿಭಾವಂತರಿಗೆ ನಗದು ಮತ್ತು ಅಬಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ