ಚಿತ್ರದುರ್ಗ:
ಭಾರತದ 45 ಯೋಧರ ಬಲಿದಾನಕ್ಕೆ ಪ್ರತಿಕಾರ ತೀರಿಸಿಕೊಂಡಿರುವ ನಮ್ಮ ಸೇನೆಯ ದಿಟ್ಟ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.ಕೇಂದ್ರ ಕಚೇರಿಯಲ್ಲಿ ಸೋಮವಾರ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಎಂ.ಹನೀಫ್‍ರವರು ಪಾಕ್‍ನ ರಶೀದ್‍ಘಾಜಿ ಜೊತೆ ಜೈಷ್ ಎ.ಮೊಹ್ಮದ್ ಕಮಾಂಡರ್ ಕಮ್ರಾನ್ ಕೂಡ ಹತ್ಯೆಯಾಗಿರುವುದು ನಿಜಕ್ಕೂ ನಮ್ಮ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸಲು ನಮ್ಮ ಸೇನೆ ಅವಕಾಶ ಕೊಡಬಾರದು ಸದಾ ಎಚ್ಚರಿಕೆಯಿಂದಿದ್ದು, ಉಗ್ರರನ್ನು ಸದೆಬಡಿದು ಪಾಕ್‍ಗೆ ತಕ್ಕ ಉತ್ತರ ಕೊಡಬೇಕು ಎಂದು ಹೇಳಿದರು.
ನಮ್ಮ ಯೋಧರ ಪ್ರಾಣ ತ್ಯಾಗಕ್ಕೆ ಸೇಡು ತೀರಿಸಿಕೊಂಡಿರುವ ಭಾರತ ಉಗ್ರ ರಶೀದ್‍ಘಾಜಿ ಅಡಗಿದ್ದ ಕಟ್ಟಡವನ್ನು ಉಡಾಯಿಸಿರುವುದರಿಂದ ಅಬ್ದುಲ್ ರಶೀಧ್‍ಘಾಜಿ ಕೂಡ ಫಿನಿಶ್ ಆದಂತಾಗಿದೆ. ಇದು ಭಾರತದ ಪ್ರತಿಯೊಬ್ಬ ಪ್ರಜೆಗೂ ನೆಮ್ಮದಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.ಭಾರತದ ಐಕ್ಯತೆ ಮತ್ತು ಒಗ್ಗಟ್ಟಿಗೆ ಧಕ್ಕೆ ತರುವವರು ಯಾರೆ ಆಗಿರಲಿ ಸರ್ಕಾರಗಳು ದಿಟ್ಟ ಕ್ರಮಗೊಂಡು ಉಗ್ರಗಾಮಿಗಳ ಹುಟ್ಟಡಗಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಸ್ನತ್‍ವುಲ್ಲಾ, ಉಪಾಧ್ಯಕ್ಷ ರಹಮತ್‍ವುಲ್ಲಾ, ಷಾಷವಲಿ, ಸಂಘಟನಾ ಕಾರ್ಯದರ್ಶಿ ಹೆಚ್.ಶಬ್ಬೀರ್‍ಭಾಷ, ಹುಸೇನ್‍ಪೀರ್, ಮಹಮದ್ ಅಪ್ಸರ್‍ಕರೀಂ, ಮಹಮದ್ ಶಫೀವುಲ್ಲಾ, ಫಾರೂಕ್, ಅಸ್ಲಂ, ಮಹಮದ್ ರಶೀದ್‍ಸಾಬ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಬ್ಬೀರ್‍ಅಹಮದ್, ಯೂಸೂಫ್, ಇರ್ಫಾನ್‍ಷರೀಫ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
