ರಾಣಿಬೆನ್ನೂರ:
ಇಲ್ಲಿನ ಮಿನಿವಿಧಾನ ಸೌಧದಿಂದ ಶ್ರೀವಿಶ್ವಕರ್ಮ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ ರಾಮಮೂರ್ತಿ ಸೋಮವಾರ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ಶ್ರೀಮೌನೇಶ್ವರ ದೇವಸ್ಥಾನದ ಸಭಾಭವನಕ್ಕೆ ಬಂದು ತಲುಪಿತು. ಭರಮಪ್ಪ ಊರ್ಮಿ, ಕರಿಯಪ್ಪ ತೋಟಿಗೇರ, ಚಿದಾನಂದ ಬಡಿಗೇರ, ಉಪತಹಶೀಲ್ದಾರ ಹಾದಿಮನಿ, ರವಿಂದ್ರಗೌಡ ಪಾಟೀಲ, ಕೆ.ಸಿ.ಕೋಮಲಾಚಾರಿ, ಬಸವರಾಜ ಬಡಿಗೇರ, ಎನ್.ಎಂ.ಕಮ್ಮಾರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ