ಹರಪನಹಳ್ಳಿ:
ಹಿಂದುತ್ವ ಕೇವಲ ಒಂದು ಧರ್ಮವಲ್ಲ, ಅದೊಂದು ಸುಸಂಸ್ಕತ ಜೀವನ ಪದ್ದತಿ. ಪ್ರತಿಯೊಬ್ಬರೂ ದೇಶಕ್ಕಾಗಿ ಒಂದಾದರೆ ವಿರೋಧಿಗಳ ಅತಿಕ್ರಮಣ ಅಸಾದ್ಯ ಎಂದು ಕುಂದಾಪುರದ ಕುಮಾರಿ ಚೈತ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ಹಾಗೂ ಕೋಟೆ ಆಂಜನೇಯಸ್ವಾಮಿ ಸಮಿತಿ ವತಿಯಿಂದ ಪ್ರತಿಷ್ಟಾಪಿಸಿರುವ ಹಿಂದೂ ಮಹಾ ಗಣಪತಿ ಕಾರ್ಯಕ್ರಮದ ರಾಜಸೋಮಶೇಖರ ನಾಯಕ ಮಹಾ ವೇದಿಕೆಯಲ್ಲಿ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಹಿಂದೂಗಳನ್ನು ಬೇರ್ಪಡಿಸುವ ಕಾರ್ಯ ನಮ್ಮವರಿಂದಲೇ ನೆಡೆದಿದೆ. ಸ್ತ್ರೀವಾದ ವಿಚಾರವಾದ ಹಾಗೂ ಬುದ್ದಿಜೀವಿಗಳ ಹೆಸರಿನಲ್ಲಿ ನಮ್ಮ ಸಂಸ್ಕತಿಯನ್ನು ವಿರೂಪಗೊಳಿಸುವ ಪ್ರಯತ್ನ ನೆಡೆದಿದೆ. ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಸಲ್ಲದು ಎಂದರು.
ಸ್ವತಂತ್ರಕ್ಕಾಗಿ ಹೋರಾಡಿದ ಪ್ರತಿ ವೀರ ವನಿತೆಯ ಯುದ್ದರಂಗದ ಕ್ಷೇತ್ರ ತೇಜಸ್ಸನ್ನು ಪ್ರತೀ ಮನೆಯ ಮಹಿಳೆಯರಿಂದಲೇ ಆರಂಭವಾಗಬೇಕಿದೆ. ಭಾರತದಂತರ ಶ್ರೇಷ್ಟ ಧರ್ಮ ಜಗತ್ತಿನಲ್ಲಿಯೇ ಇಲ್ಲ. ಹೆಣ್ಣನ್ನು ದೇವರೆಂದು ಪೂಜಿಸುವ ನಮ್ಮ ಭಾರತ ಸಂಸ್ಕತಿಯಲ್ಲಿ ಹುಟ್ಟಿದ ಮಹಿಳೆಯರಿಗೆ ಕೆಲವೇ ಕೆಲವು ದೇಗುಲಗಳ ಪ್ರವೇಶ ಅವಶ್ಯವೇ. ನೂರು ಜನ ವೀರ ಪುರುಷರಷ್ಟೇ ಶಕ್ತಿ ಒಬ್ಬ ಮುತೈದೆಯಲ್ಲಿರುತ್ತದೆ. ಅಂತಹ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸಹಿಷ್ಣುತೆಯಷ್ಟೆ ಭಾರತ ಮಂತ್ರವಲ್ಲ ನಾವು ಎಲ್ಲರನ್ನೂ ಎಲ್ಲವನ್ನೂ ಒಪ್ಪಿಕೊಂಡವರು, ಒಪ್ಪಿಕೊಂಡಮೇಲೆ ಸಹಿಷ್ಣತೆ ಅಸಹಿಷ್ಣುತೆಯ ಮಾತೆ ಬರುವುದಿಲ್ಲ. ಅನ್ಯಧರ್ಮಗಳನ್ನು ದ್ವೇಶಿಸದ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ. ಇಂತಹ ಧರ್ಮಕ್ಕೆ ಧಕ್ಕೆ ತರುವಂತಹ ಕೆಲಸಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ದುರಂತವಾಗಿದೆ ಎಂದರು.
ಹಡಗಲಿಯ ಅಭಿನವ ಹಾಲಸ್ವಾಮಿಗಳು ಮಾತನಾಡಿ. ಒಡೆಯುವ ಸಂಸ್ಕತಿಯೇ ಇಲ್ಲದವರು ಭಾರತ ಮಾತೆಯ ಸಿರಿ ಹೊತ್ತುಬಂದ ಮುತೈದೆಯರಾಗಿದ್ದಾರೆ. ಹಿಂದೂ ಮಣ್ಣಿನಲ್ಲಿ ಹುಟ್ಟಿದವರಾರೂ ಹೇಡಿಗಳಲ್ಲ. ಮನೆಯಲ್ಲಿಯೇ ಸಂಸ್ಕಾರವನ್ನು ನೀಡಿ, ಸಂಸ್ಕಾರವೇ ಇಲ್ಲದವರು ಜಗತ್ತು ಬೆಳಗಲು ಸಾದ್ಯವಿಲ್ಲ. ಧರ್ಮದ ಜಾಗೃತಿಗಾಗಿ ರಾಷ್ಟ್ರ ಜಾಗೃತಿಗಾಗಿ ಸಂಸ್ಕಾರ ಅವಶ್ಯವಿದೆಯೇ ಹೊರತು ವಿಡಿಯೋ ಗೇಮ್ ಆಡುವ ಸಂಸ್ಕತಿ ನಮ್ಮದಾಗುವುದು ಬೇಡ ಎಂದರು.
ಪ್ರತಿ ಮನೆಯಲ್ಲಿ ರಾಷ್ಟ್ರ ಕಟ್ಟುವಂತ ನಾಯಕರುಗಳನ್ನು ಕೊಡುಗೆಯಾಗಿ ನೀಡುವ ಮನಸ್ಥಿತಿಯನ್ನು ಮಹಿಳೆಯರು ಹೊಂದಬೇಕು. ಆಂಗ್ಲ ವ್ಯಾಮೋಹದಿಂದ ಅದು ಸಾದ್ಯವಿಲ್ಲ ಎನ್ನುವುದನ್ನು ಅರಿಯಿರಿ. ಕನ್ನಡ ಭಾಷೆಯ ಸಂಸ್ಕತಿ ಕಲಿಸಿ ಎಂದರು.
ಮುಂದಿನ ದಿನಗಳಲ್ಲಿ ಮಾತೃಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸೆಪ್ಟೆಂಬರ್ 22 ರಂದು ಸಂಜೆ 6 ಗಂಟೆಗೆ ಜಾಗೋ ಭಾರತ್ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ತಹಸಿಲ್ದಾರ್ ಡಾ.ಮಧು ಮಾತನಾಡಿ. ಭಾರತದ ಸಂಪ್ರದಾಯಗಳು ಅದೆಷ್ಟೇ ಆಧುನಿಕತೆಯ ಸಂಸ್ಕತಿಗಳು ಬಂದರೂ ಅಜರಾಮರವಾಗಿರುತ್ತದೆ. ಅಂತಹ ಅದ್ಬುತ ಶಕ್ತಿ ಭಾರತದ ಸಂಸ್ಕತಿಯಲ್ಲಿದೆ. ಮಣ್ಣಿನ ಗಣಪತಿ ಪ್ರತಿಷ್ಟಾಪನೆ ಪರಿಸರ ಹಿತಚಿಂತನೆಯನ್ನು ಪ್ರತಿಬಿಂಭಿಸುತ್ತದೆ. ಮಹಿಳೆಯರನ್ನು ಗೌರವ ನೀಡದವರು ಅಧೋಗತಿಗೆ ಹೋಗುವುದು ನಿಶ್ಚಿತ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಲತಾ ರಾಠೋಡ್, ನಫ್ರೀಜಾ ಭಾನು, ಭಜರಂಗಿ ಹನುಮಂತ, ಶಶಿಕಾಂತ ಪಟಗಿ, ಪಟ್ನಾಮದ ನಾಗರಾಜ್, ಚಿಕ್ಕೇರಿ ಬಸಪ್ಪ, ಹೆಚ್.ಎಂ.ಜಗದೀಶ್, ಸುರೇಂದ್ರ ಮಂಚಾಲಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








