ಜೋಡಣಾ ಕಾರ್ಯಗಾರ

ತುಮಕೂರು:

      ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಎಲ್ಲಾ ಗ್ರಾಮ ಸಭೆಗಳಿಗೆ ರೈತರು ತಪ್ಪದೆ ಭಾಗವಹಿಸಿ ಮಾಹಿತಿಯನ್ನು ಪಡೆದು ಸುಸ್ಥಿರ ಕೃಷಿ ಮಾಡಲು ಮುಂದಾಗಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಚಂದ್ರಮೂರ್ತಿ ತಿಳಿಸಿದರು.

      ನಗರದ ರೇಷ್ಮೆ ಇಲಾಖೆ ಸಭಾಂಗಣದಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್ ಹಾಗೂ ವಿವಿಧ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಜೋಡಣಾ ಕಾರ್ಯಗಾರದಲ್ಲಿ ಮಾತನಾಡಿದ ಅವರು, ರೈತರ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ರೈತ ಉತ್ಪಾದಕ ಕಂಪನಿಗಳನ್ನು ರಚಿಸಿ ರೈತರಿಗೆ ಅನುಕೂಲವಾಗುವ ಕೆಲಸಗಲನ್ನು ಮಾಡುವಂತೆ ಮಾರ್ಗದರ್ಶನ ನೀಡುತ್ತಿವೆ. ಕಂಪನಿಗಳ ರಚನೆಯಿಂದ ಮದ್ಯವರ್ತಿಗಳ ಆವಳಿಯನ್ನು ತಪ್ಪಿಸಿ ನೇರವಾಗಿ ರೈತರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತಿವೆ.

      ರೈತರು ಗ್ರಾಮ ಸಭೆಗಳಿಗೆ ಭಾಗವಹಿಸಿ ಕೃಷಿಗೆ ಪೂರಕವಾಗುವ ಕಾಮಗಾರಿಗಳನ್ನು ಸೆರ್ಪೇಡೆ ಮಾಡಿಸಿ ಸರಿಯಾದ ಸಮಯದಲ್ಲಿ ಕೃಷಿ ಮಾಡಿದರೆ ರೈತ ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ಮಟ್ಟವನ್ನು ನಿರ್ವಹಣೆ ಮಾಡಬಹುದು. ರೈತರು ಮಾಹಿತಿ ಪಡೆದುಕೊಂಡು ವ್ಯವಸಾಯ ಮಾಡಿದಾಗ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದು ಎಂದು ತಿಳಿಸಿದರೆ.

      ಐಡಿಎಫ್ ಸಂಸ್ಥೆಯ ಮು.ಲ.ಕೆಂಪೇಗೌಡ ಮಾತನಾಡಿ, ಐಡಿಎಫ್ ಸಂಸ್ಥೆಯು ಸುಮಾರು 50 ಸಾವಿರ ರೈತರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು , ತುಮಕೂರು ಜಿಲ್ಲೆಯ ಗುಬ್ಬಿ , ಕುಣಿಗಲ್ , ತುಮಕೂರು ತಾಲ್ಲೂಕುಗಳಲ್ಲಿ 12 ರೈತ ಉತ್ಪಾದಕರ ಕಂಪನಿಗಳನ್ನು ರಚಿಸಿ ಸುಜೀವನ ಕಾರ್ಯಕ್ರಮಗಳನ್ನು ಮಾಡಿಕೊಂಡು ಸುಸ್ಥಿರ ಕೃಷಿ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಕಂಪನಿಯ ಎಲ್ಲಾ ಸದಸ್ಯರಿಗೆ ಆರ್ಥಿಕ ಸೆರ್ಪೆಡೆಯ ದೃಷ್ಠಿಯಲ್ಲಿ ಸಾಲಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಂಕ್ ಮಿತ್ರರ ಸಹಕಾರಿದಿಂದ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯವನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

       ಕಾರ್ಯಗಾರದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕಿ ಲತಾ, ರೇಷ್ಮೆ ಇಲಾಖೆಯ ಸಹನಿರ್ದೇಶಕ ಬಾಲಕೃಷ್ಣ, ಉಪಅರಣ್ಯಾಧಿಕಾರಿ ಅನಿಲ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ರಮೇಶ್, ಪ್ರಶಾಂತ್, ಐಡಿಎಫ್ ಸಂಸ್ಥೆಯ ಮಲ್ಲಿಕಾರ್ಜುನ್ ಹೊಸಪಾಳ್ಯ, ಗುರುದತ್, ತಾಲ್ಲೂಕು ಸಂಯೋಜಕ ಸುರೇಶ್ ಮತ್ತಿತರರು ಇದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link