ಕನ್ನಡ ಸಾಹಿತ್ಯದ ಜನ್ಮಸ್ಥಳ ಧಾರವಾಡ ಜಿಲ್ಲೆ

ಸಿರಿಗೇರಿ:

    ಸಾಹಿತ್ಯವೆಂಬುದು ನಿರ್ಜೀವ ವಸ್ತುವಲ್ಲ. ಅದು ಜ್ಞಾನದ ಜ್ಯೋತಿಯ ಅಣತೆ ಹೊತ್ತಿಸಿ ಜಗತ್ತನ್ನು ಬೆಳಗುವ ಆಶಾಕಿರಣವೆಂದು ಸಮೀಪದ ಕಲ್ಲುಕಂಬ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಉಪನ್ಯಾಸಕ ಬಿ.ಅರುಣ್ ಕುಮಾರ್ ತಿಳಿಸಿದರು.

   ಅವರು ಸಿರಿಗೇರಿ ಸಮೀಪದ ಎಂ.ಸೂಗೂರು ಸ,ಪ್ರೌಢ ಶಾಲಾ ಮೈದಾನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಏರ್ಪಡಿಸಿದ್ದ “ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯಕ್ಕೆ ಧಾರವಾಡದ ಕೊಡುಗೆ” ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ಇತಿಹಾಸವಿದೆ. ಇದರಲ್ಲಿ ಧಾರವಾಡದ ಆಡು ಭಾಷೆ ಮನ್ನಣೆ ಪಡೆದಿದೆ. ಧಾರವಾಡವೆಂಬುದು ಆಲದ ಮರವಿದ್ದಂತೆ.

   ಕಾರಣ ಇಲ್ಲಿನ ನೆಲದಲ್ಲಿ ಚಂದ್ರಶೇಖರ್ ಕಂಬಾರ, ಶಿವರಾಂ ಕಾರಂತ, ಎಂ.ಎಂ.ಕಲ್ಬುರ್ಗಿಯವರಂತಹಾ ಮಹಾನ್ ಸಾಹಿತಿಗಳು ಜ್ಞಾನ ಕೋಶ ಪಡೆಯುದರೊಟ್ಟಿಗೆ ಕನ್ನಡ ನುಡಿಗಟ್ಟುಗಳನ್ನು ಉಳಿಸುವಲ್ಲಿ ಅವಿರತ ಪ್ರಯತ್ನ ಮಾಡಿದ್ದಾರೆ. ಇದರ ಜೊತೆಯಲ್ಲಿ ಧಾರವಾಡ ನೆಲದ ಭಾಷೆ ನಡೆ ನುಡಿಗಾಗಿ ಕದಂಬ, ಚಾಳುಕ್ಯ ವಂಶ, ಬಿಜಾಪುರ ನಿಜಾಮುದ್ದೀನ್ ಆಳ್ವಿಕೆ ಕೂಡ ಶ್ರಮಿಸಿದೆ. ಇಂತಹಾ ನೆಲದ ಋಣದಲ್ಲಿ ಬೆಳೆದ ಪ್ರತಿಯೊಬ್ಬ ಕನ್ನಡಿಗರು ಧಾರವಾಡದ ಭಾಷೆಯನ್ನು ಗೌರವಿಸಬೇಕೆಂಬ ಸಲಹೆ ನೀಡಿದರಲ್ಲದೆ, ಸಂಗೀತದ ಕಲೆಯಲ್ಲಿ ಭೀಮಶೇನ್ ಜೋಷಿ, ಮಲ್ಲಿಕಾರ್ಜುನ ಮಷ್ಕಿ, ಗಂಗೂಬಾಯಿ ಹಾನಗಲ್‍ರಂತಹಾ ದಿಗ್ಗಜರನ್ನು ಪಡೆದಿದ್ದಲ್ಲದೆ ಜ್ಞಾನ ಪೀಠ ಪ್ರಶಸ್ತಿ ಬೇಂದ್ರೆ, ಶಿವರಾಂ ಕಾರಂತ, ದತ್ತಾತ್ರೆಯರಂತಹಾ ಮಹಾನ್ ಸಾಹಿತಿಗಳ ಇತಿಹಾಸ ಹೊಂದಿದ ಕೀರ್ತಿ ಧಾರವಾಡ ಸೇರಿದಂತೆ ಇಡೀ ಜಾಗತಿಕ ಮನ್ನಣೆ ಗಳಿಸಿರುವುದು ಕನ್ನಡಿಗರ ಹೆಮ್ಮೆಯ ಸಂಗತಿ ಎಂದರು.

    ತದ ನಂತರ “ನಿತ್ಯ ಜೀವನದಲ್ಲಿ ವಿಜ್ಞಾನದ ಪಾತ್ರ” ಕುರಿತು ಉಪನ್ಯಾಸ ನೀಡಿದ ಗೆಣಿಕೆಹಾಳ್ ಸ,ಪ್ರೌಢ ಶಾಲೆಯ ಶಿಕ್ಷಕ ಡಿ.ಎಂ.ಮಲ್ಲಿಕಾರ್ಜುನ “ ನಿತ್ಯ ಜೀವನದಲ್ಲಿ ವಿಜ್ಞಾನದ ಗ್ರಹಿಕೆ ಹಾಗೂ ತಿಳುವಳಿಕೆ ಬಹುಮುಖ್ಯ. ಕವಿ ಬೇಂದ್ರೆಯವರು ಹೇಳಿದಂತೆ “ಬಡವರ ಒಡಲಿನ ಬಡದಾಗ್ನಿ.. “ಹಸಿವು” ಮತ್ತೇನಿಲ್ಲ..

     ಹಸಿವಿನ ಕಿಡಿ ಹೊರ ಹೊಕ್ಕರೆ ಆರಿಸುವ ಶಕ್ತಿಯುಂಟೇ.. ಎಂಬಂತೆ ಜಾತಿ ಮತ ಪಂಥಗಳನ್ನು ಅವರವರ ಕೃಷಿ ಚಚುವಟಿಕೆ ಆಧಾರದಲ್ಲಿ ಸೃಷ್ಠಿ ಮಾಡಿದವನೇ ಮಾನವ. ಗಿಡ ಮರದ ಗಾಳಿ ಗಂಧವಿಲ್ಲದೆ ಮನುಷ್ಯನ ಜೀವನ ಸಾಗುವುದು ಹೇಗೆ ಸಾಧ್ಯ? ಇಂದಿನ ಪ್ರಸ್ತು ವಿಧ್ಯಮಾನದಲ್ಲಿ ಅದಿರು ಲೂಟಿ ಯಥೇಚ್ಛವಾಗಿ ಜರುಗುತ್ತಿದೆ. ಇದರಿಂದ ನಾನಾ ರೋಗ ರುಜಿನ ಮಳೆ ಅಭಾವ ಜನರನ್ನು ಕಿತ್ತು ಕಾಡುತ್ತಿದೆ. ಅವೈಜ್ಞಾನಿಕತೆಯಿಂದ ಮೂಢ ನಂಬಿಕೆಗಳತ್ತ ಸಾಗುತ್ತಿರುವ ಮನುಜರು ವೈಜ್ಞಾನಿಕ ವಿಜ್ಞಾನದ ಗುಣಗಳನ್ನು ಅಲ್ಲಗಳೆಯುತ್ತಿರುವುದು ದುರಾದೃಷ್ಟಕರ ಸಂಗತಿ. ಪ್ರತಿಯೊಬ್ಬರೂ ಕೂಡ ಗಿಡ ಮರಗಳನ್ನು ನೆಡುವುದರ ಮೂಲಕ ಅಂತರ್ಜಲ ಹೆಚ್ಚಿಸಿ ಪ್ರಕೃತಿ ವಿಕೋಪ ತಡೆಯಬೇಕೆಂದರು.

     ಇದೆ ವೇಳೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ, ಸಿರಿಗೇರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಅಡಿವೆಯ್ಯ ಸ್ವಾಮಿ ಶಾಲಾ ಮುಖ್ಯಗುರು ಶ್ರೀನಿವಾಸ್, ಡಾ: ಮೃತ್ಯುಂಜಯ, ಸೇರಿದಂತೆ ಇತರರು ಮಾತನಾಡಿದರು.
ಈ ಸಂದಂರ್ಭದಲ್ಲಿ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

      ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ರತ್ನಮ್ಮ ಅಡಿವೆಯ್ಯ ಸ್ವಾಮಿ, ತಾಪಂ ಸದಸ್ಯ ಕರೆಪ್ಪ, ಗ್ರಾಪಂ ಅಧ್ಯಕ್ಷೆ ಮೂಕಮ್ಮ ಹನುಮಂತಪ್ಪ, ದತ್ತಿ ದಾನಿಗಳಾದ ಬಿ.ತಿಮ್ಮಪ್ಪ, ಈರಣ್ಣ, ಗಣಪತಿ ವಾಸುದೇವ ಶೆಟ್ಟಿ, ಸುನಂದ ಬಿ.ಶೆಟ್ಟಿ, ಎಸ್.ಡಿಎಂ.ಸಿ ಉಪಾಧ್ಯಕ್ಷ ಶೇಖರ್ ಗೌಡ ಹಾಗೂ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಮತ್ತು ಕಸಾಪ ತಾಲೂಕು ಘಟಕದ ಪಾದಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ವೃಂದದವರಾದ ದೇವಪ್ಪ, ಗೋಪಾಲ ಸ್ವಾಗತಿಸಿ, ಲಕ್ಷ್ಮಿದೇವಿ, ಆರ್. ರವಿ ನಿರೂಪಿಸಿ, ಶೃತಿ ಮಹದೇವಯ್ಯ, ಅನ್ನಪೂರ್ಣ ವಂದಿಸಿದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link