ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ರೈತ ಸಂಘದ ಒತ್ತಾಯ

ಹಿರಿಯೂರು:

       ಬ್ಯಾಂಕುಗಳಲ್ಲಿ ರೈತರು ಬಂಗಾರದ ಒಡವೆಗಳನ್ನು ಅಡವಿಟ್ಟು ಕೃಷಿಕಾರ್ಯಗಳಿಗಾಗಿ ಸಾಲ ಮಾಡಿರುತ್ತಾರೆ. ಆದರೆ ಈಗ ಬರಗಾಲ ಆವರಿಸಿರುವುದರಿಂದ ರೈತರು ಸಾಲ ಕಟ್ಟಲು ಆಗದೇ ಇರುವುದರಿಂದ, ಬ್ಯಾಂಕುಗಳು ರೈತರಿಗೆ ಕಾಲ ಅವಕಾಶ ನೀಡಿ, ರೈತರ ಒಡವೆಗಳ ಹರಾಜು ರದ್ದು ಪಡಿಸಬೇಕೆಂದು ಒತ್ತಾಯಿಸಿ, ಜಿಲ್ಲಾ ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ ಇವರ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಯರಬಳ್ಳಿ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

       ಸುಮಾರು ವರ್ಷಗಳಿಂದ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದ್ದು ಮತ್ತು ಬೆಳೆ ಬಂದಾಗ ಬೆಲೆ ಕುಸಿತವಾಗಿ ನಷ್ಟಗಳನ್ನು ಅನುಭವಿಸಿರುತ್ತಾರೆ ಆದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಜ್ಯ ಸರ್ಕಾರಗಳಿಗೆ ಸುಮಾರು ನಮ್ಮ ಜಿಲ್ಲೆಯಿಂದ 12158 ಅರ್ಜಿಗಳನ್ನು ಚಿತ್ರದುರ್ಗ ಜಿಲ್ಲಾ ಅಧಿಕಾರಿಗಳ ಮುಖಾಂತರ ಸರ್ಕಾರದ ಗಮನಕ್ಕೆ ತರಲಾಗಿತ್ತು ಆ ಕಾರಣದಿಂದ ಈಗ ಸರ್ಕಾರ ಹಂತಹಂತವಾಗಿ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಲು ಒಪ್ಪಿಗೆ ಕೊಟ್ಟಿರುವುದರಿಂದ ಮತ್ತು ರೈತರ ಬೆಳೆ ಬರುವವರೆಗೂ ಕಲಾವಕಾಶ ಕೊಡಬೇಕೆಂಬ ಪ್ರಗತಿ ಕೃಷ್ಣ ಗ್ರಾಮೀಣಬ್ಯಾಂಕ್ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಮಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap