ಪುನರ್ವಸತಿ ಯೋಜನಾಧಿಕಾರಿಗಳ ಭ್ರಷ್ಠಾಚಾರ ವಿರುದ್ಧ ಹರಿಹಾಯ್ದ ಸಂಘಟಕರು

ಹಗರಿಬೊಮ್ಮನಹಳ್ಳಿ:

      ಸರ್ಕಾರದ ಸೌಲಭ್ಯಗಳನ್ನು ಪಡೆಯುವ ದೇವದಾಸಿ ಮಹಿಳಾ ಫಲಾನುಭವಿಗಳಿಂದ ಯೋಜನೆಯ ತಾಲೂಕು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಆರೋಪಿಸಿ ದೇವದಾಸಿ ವಿಮೋಚನ ಸಂಘದ ನೂರಾರು ಮಹಿಳೆಯರು ತಾಲೂಕು ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

      ಪಟ್ಟಣದ ಈಶ್ವರ ದೇಗುಲದಿಂದ ಆರಂಭವಾದ ಪ್ರತಿಭಟನೆ ಬಸವೇಶ್ವರ ಬಜಾರದ ಮೂಲಕ ಸಾಗಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿಯ ಮುಂದೆ ಆಗಮಿಸಿ ಪ್ರತಿಭಟನೆ ನಡೆದಿರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ಆಯ್ಕೆಯಾದ ಫಲಾನುಭವಿಗಳಿಂದ ರಾಜ್ಯದ ಯೋಜನಾ ತಾಲೂಕು ಅಧಿಕಾರಿಗಳು ಕೆಳಿದಷ್ಟು ಹಣ ನೀಡಬೇಕು, ಒಂದು ವೇಳೆ ಹಣ ನೀಡದಿದ್ದರೆ ಫಲಾನುಭವಿಗಳ ಪಟ್ಟಿಯಿಂದ ಆಯ್ಕೆಯಾದವರನ್ನು ಕೈಬಿಡುತ್ತಾರೆ. ಒಬ್ಬರಿಂದ 500 ರೂ.ಗಳಿಂದ 10ಸಾವಿರ ರೂ.ಗಳವರೆಗೂ ಹಣ ಸಂಗ್ರಹಿಸುತ್ತಾರೆ.

      ಇದರಲ್ಲಿ ಪುನರ್ವಸತಿ ಜಿಲ್ಲಾ ಯೋಜನಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳ ಫಾಲಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.ದಲಿತರು ಹಾಗೂ ದೇವದಾಸಿ ಮಹಿಳೆಯರ ವಿರುಧಿಯಾಗಿ ಈ ಭ್ರಷ್ಟರು ಕಾರ್ಯನಿರ್ವಹಿಸುತಿದ್ದಾರೆ. ತಮ್ಮ ಭ್ರಷ್ಠಾಚಾರವನ್ನು ಮುಚ್ಚಲು ಸಂಘಟನೆಯಲ್ಲಿರುವ ಫಲಾನುಭವಿಗಳನ್ನು ಸಂಘಟನೆಯೊಂದಿಗೆ ಸೇರಿಕೊಳ್ಳಬೇಡಿ ಎಂದು ಸಲಹೆ ನೀಡುತ್ತಿದ್ದು ಸಂಘಟನೆಯನ್ನು ಮುರಿಯಲು ಯತ್ನಿಸುತಿದ್ದಾರೆ ಎಂದು ದೂರಿದರು.

      ಸಂಘಟಕರಿಗೆ ಬೆಂಬಲ ಸೂಚಿಸಿ ಸಿಐಟಿಯು ಸಂಚಾಲಕ ಎಸ್.ಜಗನ್ನಾಥ್ ಮಾತನಾಡಿ, ಎಲ್ಲಾ ಸೌಲಭ್ಯಗಳು ಫಲಾನುಭವಿಗಳ ಆಯ್ಕೆಯಲ್ಲಿ ಆಯಾ ಗ್ರಾ.ಪಂ. ಪಟ್ಟಣವಾದರೆ ವಾರ್ಡ್‍ಗಳ ಸಭೆಯಲ್ಲಿ ತಾ.ಪಂ.ಇಒ ಅಥವಾ ತಹಸೀಲ್ದಾರ್ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆಮಾಡಬೇಕು. ಆಯ್ಕೆಯಾದವರ ಪಟ್ಟಿಯನ್ನು ನೋಟಿಸ್ ಬೋರ್ಡ್‍ಗಳಲ್ಲಿ ಪ್ರಕಟಿಸಬೇಕು. ಪುನರ್ವಸತಿ ಯೋಜನೆಗಳ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳನ್ನು ರಾಜ್ಯದ ಬೇರೆಬೇರೆ ಜಿಲ್ಲೆಗಳಿಗೆ ಪ್ರತಿವರ್ಷ ವರ್ಗಾಹಿಸಬೇಕು ಮತ್ತು ಭ್ರಷ್ಠಾಚಾರ ಅಧಿಕಾರಿಗಳ ವಿರುದ್ಧ ಲಿಖಿತ ದೂರುಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದರು.

       ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಸಚಿವೆಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ವಿಜಯಕುಮಾರ್‍ಗೆ ಸಲ್ಲಿಸುವ ಮೂಲಕ ತಮ್ಮ ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿದರು.

       ಸಂಘಟನೆಯ ತಾಲೂಕು ಅಧ್ಯಕ್ಷೆ ಬಿ.ಮೈಲಮ್ಮ, ಕಾರ್ಯದರ್ಶಿ ಪಿ.ಚಾಂದ್‍ಬೀ, ದೊಡ್ಡಬಸಮ್ಮ, ಎ.ಹನುಮಕ್ಕ, ಎಚ್.ಬಸಮ್ಮ, ತಟ್ನೆಮ್ಮ, ಹುಲಿಗೆಮ್ಮ, ಭರಮಮ್ಮ, ಕೆ.ಅಂಜಿನಮ್ಮ, ಪಿ.ಜ್ಯೋತಿ, ಸಮಾದೇಮ್ಮ, ಜಿ.ಆರ್.ಮಲ್ಲಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link