ಬೆಂಗಳೂರು:
ವಾಹನ ಉದ್ಯಮದಲ್ಲಿ ಎಲೆಕ್ಟ್ರಾನಿಕ್ ವಾಹನಗಳನ್ನು ಯಾವುದೇ ರೀತಿಯ ಹೆಚ್ಚಿನ ಬಂಡವಾಳವಿಲ್ಲದೆ ಸಾಂಪ್ರಾದಾಯಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವ ಅನಂತ್ ಗೀತೆ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ವಾಹನ ಉದ್ಯಮ ಅಭಿವೃದ್ಧಿ ಕುರಿತ 3ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಚಿವಾಲಯ 2030ರೊಳಗೆ ಎಲೆಕ್ಟ್ರಾನಿಕ್ ವಾಹನಗಳ ಅಳವಡಿಕೆ ಕುರಿತ ಶೇಕಡ 100 ರಷ್ಟು ಸಾಧನೆ ಬಗ್ಗೆ ಯಾವುದೇ ರೀತಿಯ ಗಡವು ಹೊಂದಿಲ್ಲ ಈ ವಿಚಾರದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಶೇಕಡ 30 ರಷ್ಟು ಸಾಧನೆ ಮಾಡಿಲ್ಲ ಎಲೆಕ್ಟ್ರಾನಿಕ್ ವಾಹನ ಉದ್ಯಮದ ಗರಿಷ್ಠ ಸಾಧನೆಗಾಗಿ ಉತ್ತಮ ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
