ಬೆಳಗಾವಿ :
ವಾದಿರಾಜ ಬಬಲಾದಿ ಕನ್ನಡದ ಮತ್ತೊಬ್ಬ ಅಧ್ಬುತ ಸ್ಟ್ಯಾಂಡಪ್ ಕಲಾವಿದ. ಬೆಳಗಾವಿ ಜನರು ಇಂತಹ ಕಲಾವಿದರನ್ನು ಬೆಳಸಬೇಕು ಎಂದು ಉತ್ತರ ಕರ್ನಾಟಕದ ಸೋಷಿಯಲ್ ಮಿಡಿಯಾ ವಿಡಿಯೋ ಕ್ರಿಯೆಟರ್ಸ್ ಅಭಿಪ್ರಾಯ ಪಟ್ಟರು.
ಭಾನುವಾರ ನಗರದ ಕನ್ನಡ ಭವನದಲ್ಲಿ ಮ್ಯಾಗನೇಟ್ ಐಸ್ ಕ್ರೀಮ್ ಹಾಗೂ ಬಿ.ಎಸ್.ಸಿ ಟೆಕ್ಸಟೆಲ್ಸ್ ಸಹಭಾಗಿತ್ವದಲ್ಲಿ “18 ಆದ್ರಾವ್ ಬರ್ರೀ” ಎಂಬ ಕನ್ನಡ ಕಾಮಿಡಿ ಶೋ ಜರುಗಿತು. ವಾದಿರಾಜ ಬಬಲಾದಿ ಅವರ ಹಾಸ್ಯಭರಿತ ಮಾತುಗಳು ಕನ್ನಡ ಭವನದಲ್ಲಿ ಜರುಗಿದ್ದ ಜನರು ನಗೆ ಕಡಲಲ್ಲಿ ತೆಲುವಂತೆ ಮಾಡಿತು.
ಆಧುನಿಕ ಯುಗದಲ್ಲಿ ಜನರು ನಗುವುದನ್ನೇ ಮರೆತ್ತಿದ್ದಾರೆ. ಕೆಲಸ, ಕೆಲಸ ಎಂದು ನಗು ಮರೆತ್ತಿರುವ ಜನರ ಮನಸ್ಸಿಗೆ ಖುಷಿ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಿರೀಕ್ಷೆಗೂ ಮೀರಿ ಜನರ ಪ್ರತಿಕ್ರಿಯೆ ಸಿಕ್ಕಿರುವುದು ನನ್ನ ಭಾಗ್ಯ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಸೋಷಿಯಲ್ ಮಿಡಿಯಾ ಕಂಟೆನರ್ಸ್ ಭಾಗಿಯಾಗಿರುವುದು ನನಗೆ ಆನೆ ಬಲ ಸಿಕ್ಕಂತಾಗಿದೆ ಎಂದು ವಾದಿರಾಜ ಬಬಲಾದಿ ತಿಳಿಸಿದರು.
300 ಜನರು ಕುಳಿತುಕೊಳ್ಳಬಹುದಾದ ಕನ್ನಡ ಭವನದಲ್ಲಿ ಸಾಕಷ್ಟು ಜನರು ಟಿಕೆಟ್ ಸಿಗದೇ ನಿರಾಶೆ ಅನುಭವಿಸಬೇಕಾಯಿತು. ಕುಟುಂಬ ಸಮೇತವಾಗಿ ಆಗಮಿಸಿದ್ದ ಜನರು ವಾದಿರಾಜ ಹಾಗೂ ಸಂಗಡಿಗರ ಹಾಸ್ಯಭರಿತ ಮಾತುಗಳಿಗೆ ಜೀವನದ ಜಂಜಾಟಗಳನ್ನು ಮರೆತು ಆನಂದಿಸಿದರು.
ಈ ವೇಳೆ ಜಿಪಂ ಸಿಇಒ ರಾಹುಲ್ ಶಿಂಧೆ ಕುಟಂಬಸಮೇತ ಆಗಮಿಸಿದ್ದರು. ಸಮಾಜ ಸೇವಕರಾದ ಶರತ್ ಕವಟಗಿಮಠ, ಮ್ಯಾಗನೇಟ್ ಐಸ್ ಕ್ರೀಮ್ ಕಂಪನಿಯ ವ್ಯವಸ್ಥಾಪಕ ಹಾಗೂ ಯುವ ಮುಖಂಡ ದಿಗ್ವಿಜಯ ಸಿದ್ನಾಳ, ಮಾಳಮಾರುತಿ ಠಾಣೆಯ ಪಿಎಸ್ಐ ಹೊನ್ನಪ್ಪ ತಳವಾರ, ಮಾರ್ಕೆಟ್ ಠಾಣೆಯ ಪಿಎಸ್ಐ ವಿಠ್ಠಲ ಹಾವನ್ನವರ ಸೇರಿದಂತೆ ಇತರರಿದ್ದರು.