ಇಸ್ರೇಲ್ ಕೃಷಿ ಮಾದರಿ ಅಳವಡಿಕೆಗೆ ಕರೆ

ಹಾವೇರಿ :

      ರಾಜ್ಯದ ರೈತರಿಗೆ ಆಧುನಿಕ ಕೃಷಿ ಪದ್ದತಿಯ ಅಳವಡಿಸಿಕೊಂಡು ಬೇಸಾಯ ಮಾಡುವಂತಹ ತರಬೇತಿ ನೀಡುವುದು ಅತ್ಯಾವಶಕವಾಗಿದೆ ಎಂದು ತೋಟಗಾರಿಕೆ ಸಚಿವ ಎಂಸಿ ಮನಗೋಳಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರೈತರಿಗೆ ಹಲವಾರು ಬಗೆಯ ಕೃಷಿ ಪದ್ದತಿಗಳನ್ನು ತಿಳಿಸಿ ಹೇಳಿ ಅವುಗಳನ್ನು ಬಳಸಿಕೊಂಡು ಬೇಸಾಯ ಮಾಡುವುದು ಸೂಕ್ತ. ಇಸ್ರೇಲ್ ಮಾದರಿ ಕೃಷಿಯನ್ನು ಇಲ್ಲಿ ಅನ್ವಯ ಮಾಡುವುದು ಕಷ್ಟಕರ.

      ಆದರೆ ಅದರ ತಿಳುವಳಿಕೆ ಉಂಟು ಮಾಡಿ ತರಬೇತಿ ನೀಡಬೇಕು. ಇಸ್ರೇಲ್ ದೇಶದಲ್ಲಿ ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ, ಹಣ್ಣು ಹಂಪಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರೊಂದಿಗೆ ಕಡಿಮೆ ಕರ್ಚು ಮಾಡಿ ಅಧಿಕ ಆದಾಯ ಮಾಡಿಕೊಳ್ಳುತ್ತಾರೆ. ಆದರೆ ನಮಗೆ ಬೆಳೆಗಳಿಗೆ ಎಷ್ಟು ನೀರು ನೀಡಬೇಕು ಎಂಬ ಅರಿವಿನ ಕೊರತೆ ಇದೆ.ಬೇಸಾಯ ಪದ್ದತಿಯಲ್ಲಿ ಬದಲಾವಣೆ ತಂದು ರೈತರ ಆದಾಯ ಹೆಚ್ಚಾಗುವ ತೋಟಗಾರಿಕಾ ಬೆಳೆ ಬೆಳೆಯಲು ಉತ್ತೇಜನ ನೀಡಲಾಗುವುದು.

      ಜಿಲ್ಲೆಗೆ 15 ಕೋಟಿ ರೂ ಗಳನ್ನು ತೋಟಗಾಗಿಕೆಗೆ ನೀಡಲಾಗಿದೆ. ಇಸ್ರೇಲ್ ಮಾದರಿಯ ಅಳವಡಿಕೆಯ ಜಿಲ್ಲೆಯಾಗಿದ್ದು 150 ಕೋಟಿ ರೂ ಗಳನ್ನು ಸರ್ಕಾರ ನೀಡಲಾಗಿತ್ತಿದೆ. ಈವರಿಗೆ ಸಂಬಂಧಿಸಿದಂತೆ 1500 ರೈತರಿಗೆ ತರಬೇತಿ ನೀಡಲಾಗಿದೆ ಎಂದರು. ಜಿಲ್ಲೆಯ ದೇವಿಹೊಸೂರ ಗ್ರಾಮದಲ್ಲಿ ತೋಟಗಾರಿಕೆ ಕಾಲೇಜ ಕಟ್ಟಡ ಪ್ರಾರಂಭವಾಗಿದೆ. ಅತಿ ಶೀಘ್ರದಲ್ಲಿಯೇ ತರಗತಿಗಳು ಇಲ್ಲಿಯೇ ನಡೆಯುವಂತೆ ಮಾಡಲು ಸಹಕರಿಸಿ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಕುಮಾರಸ್ವಾಮಿಯವರನ್ನು ಮನವೊಲಿಸಲಾಗುವುದು ಎಂದು ಸಚಿವ ಎಂಸಿ ಮನಗೋಳಿ ಹೇಳಿದರು.

      ಈ ಸಂದರ್ಭದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ|| ಸಂಜಯ ಡಾಂಗೆ.ಜಿಲ್ಲಾಧ್ಯಕ್ಷರಾದ ಅಶೋಕ ಬೇವಿನಮರ.ಗೌರವಾಧ್ಯಕ್ಷ ಉಮೇಶ ತಳವಾರ.ಶ್ರೀಪಾದ ಸಾಹುಕಾರ.ಶಿವಕುಮಾರ ಮಠದ. ಎಸ್‍ಎಸ್ ಕಳ್ಳಿಮನಿ.ನಗರ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ..ಮುಖಂಡರಾದ ಸುನೀಲ ದಂಡೆಮ್ಮನವರ. ಮಾತೇಂಶ ಬೇವಿನಹಿಂಡಿ. ಪರಶುರಾಮ ಹಾವೇರಿ. ಅಮೀರಜಾನ ಬೇಪುರಿ.ಸೈಯದ್ ಜಮಾದಾರ. ಅಲ್ತಾಪ್ ನಧಾಫ್ ಇತರರು ಇದ್ದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link