ಸಮನ್ವಯ ಶಿಕ್ಷಣ ಕುರಿತು ಶಿಕ್ಷಕರಿಗೆ ತರಬೇತಿ

ಹಾನಗಲ್ಲ :

     ಸಮಾಜದ ಮುಖ್ಯ ವಾಹಿನಿಯಲ್ಲಿ ನ್ಯೂನತೆಯುಳ್ಳ ಮಕ್ಕಳು ಬೆರೆಯುವಂತೆ ಮಾಡಿದರೆ ಅದಕ್ಕಿಂತ ದೊಡ್ಡಪುಣ್ಯ ಇನ್ನೊಂದಿಲ್ಲ. ಇಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ದೊಡ್ಡ ಕ್ರಾಂತಿಯ ಕೆಲಸ ಎಂದು ಪುರಸಭೆ ಸದಸ್ಯ ಅನಂತವಿಕಾಸ ನಿಂಗೋಜಿ ನುಡಿದರು.

      ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಎ.ಪಿ.ಡಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಮನ್ವಯ ಶಿಕ್ಷಣ ಕುರಿತು ಶಿಕ್ಷಕರಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನ್ಯೂನತೆಯುಳ್ಳ ಮಕ್ಕಳಿಗೆ ಕಲಿಕೆ ಆರಂಭಿಸಿ ಯಶಸ್ವಿಯಾಗುವುದು ಶ್ರದ್ಧೆ, ಕ್ರಿಯಾಶೀಲತೆ ಇದ್ದ ಶಿಕ್ಷಕನಿಂದ ಮಾತ್ರ ಸಾಧ್ಯ. ಅಲ್ಲದೆ ಈ ಮಕ್ಕಳನ್ನು ತನ್ನ ಮನೆಯ ಮಕ್ಕಳಂತೆ ಕಂಡು ಉತ್ತಮ ಭವಿಷ್ಯ ನೀಡಲು ಮುಂದಾಗಬೇಕಾಗುತ್ತದೆ. ರೋಶನಿ ಸಮಾಜ ಸೇವಾ ಸಂಸ್ಥೆ ಈ ಖಾರ್ಯದಲ್ಲಿ ಮಾಡಿರುವ ಸಾಧನೆ ಸಮಾಜ ಮೆಚ್ಚುವಂತಹದ್ದು ಎಂದರು.

     ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಆರ್‍ಸಿ ಜಿ.ಎ.ಗುಮ್ಜದ, ಸಮನ್ವಯ ಎಂದರೆ ಎಲ್ಲರಿಗೂ ಸಮಾನ ಶಿಕ್ಷಣ ಕೊಡುವುದು ಎಂದರ್ಥ. ಇಂತಹ ತರಬೇತಿಯ ಗುಣಗಳನ್ನು ಅರ್ಥಮಾಡಿಕೊಂಡಿದ್ದಾದರೆ ಮಕ್ಕಳಿಗೆ ಶಿಕ್ಷಣ ಕೊಡಲು ಶಿಕ್ಷಕರಿಗೆ ಸುಲಭದ ಕೆಲಸವಾಗುತ್ತದೆ.

      ಪ್ರತಿಯೊಬ್ಬರಲ್ಲೂ ವಿಕಲತೆ ಇರುತ್ತದೆ, ಇದರಲ್ಲಿ ಇಂತಹ ಮಕ್ಕಳನ್ನು ಸೌಲಭ್ಯ ವಂಚಿತರನ್ನಾಗಿಸಬಾರದು. ಎಲ್ಲ ಶಿಕ್ಷಕರ ಸೇವೆ ನ್ಯೂನ್ಯತಾ ಮಕ್ಕಳ ಪಾಲಿಗಿರಬೇಕು. ಸಾಮಾನ್ಯ ಮಗುವಿಗೆ ಇದ್ದಂತಹ ಸಾಮಾನ್ಯ ಜ್ಞಾನದಲ್ಲಿ ಕಡಿಮೆ ಪ್ರಮಾಣ ಮಾತ್ರ ವಿಕಲಚೇತನ ಮಕ್ಕಳಲ್ಲಿರುತ್ತದೆ. ಸಾಮಾನ್ಯ ಮಕ್ಕಳ ಜೊತೆಗೆ ವಿಕಲಚೇತನ ಮಕ್ಕಳನ್ನು ಬೆಳೆಸೋಣ ಎಂದರು.

      ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿ.ಡಿಂಪಲ್ ಡಿಸೋಜಾ ಮಾತನಾಡಿ, ಸಮನ್ವಯ ಶಿಕ್ಷಣ ಹೇಗೆ ನೀಡಬೇಕು ಎಂಬುದನ್ನು ತಿಳಿಸುವುದಕ್ಕೊಸ್ಕರ ಈ ತರಬೇತಿಯನ್ನು ಏರ್ಪಡಿಸಲಾಗಿದೆ, ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಯಾವ ರೀತಿ ಕಲಿಸುವುದು ಹಾಗೂ ಸಮಾಜದಲ್ಲಿ ಪರಸ್ಪರ ಪ್ರೀತಿ-ಕಾಳಜಿ ಸಹಕಾರವನ್ನು ಈ ಸಮನ್ವಯ ಶಿಕ್ಷಣ ಕಲಿಸಿಕೊಡುತ್ತದೆ.

    ಲಭ್ಯವಿರುವ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ಕಲಿಕೆಯನ್ನು ನೀಡಬೇಕಾಗಿದೆ. ಕಲಿಕೆ ಎಂಬುದು ಯಾವುದೇ ಹೊರೆ ಎನಿಸದ ಹಾಗೆ ಕಲಿಕೆಯನ್ನು ಹೆಚ್ಚಿಸಬೇಕು ಮತ್ತು ಮಕ್ಕಳು ಓದಲು ಬರೆಯಲು ಬಾರದೇ ಇದ್ದರೂ ಕೂಡ ಮಕ್ಕಳ ಆಂತರಿಕ ಸಾಮಥ್ರ್ಯವನ್ನು ಹೆಚ್ಚಿಸುವುದು ಸಮನ್ವಯ ಶಿಕ್ಷಣದಿಂದಾಗಬೇಕಾದ ಕೆಲಸವಾಗಿದೆ ಎಂದು ಸಮನ್ವಯ ಶಿಕ್ಷಣ ಮಹತ್ವವನ್ನು ತಿಳಿಸಿದರು.

     ಬಿಆರ್‍ಸಿ ಎನ್.ಎಸ್.ಮಾಶೆಪ್ಪನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಗುಡದೇಶ, ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಎಪಿಡಿ ಸಂಸ್ಥೆಯ ಆರ್. ರವಿ ಉಪಸ್ಥಿತರಿದ್ದರು. ಸಮನ್ವಯ ಶಿಕ್ಷಣ ತಂಡದ ಸಂಯೋಜಕ ಡಿಗ್ಗಪ್ಪ ಲಮಾಣಿ ಸ್ವಾಗತಿಸಿದರು. ಕೃಷ್ಣಪ್ಪ ಅಕ್ಕಿವಳ್ಳಿ ನಿರೂಪಿಸಿದರು.

     ಈ ಎರಡು ದಿನದ ತರಬೇತಿಯಲ್ಲಿ ಅಂಗವಿಕಲತೆಯ ಲಕ್ಷಣಗಳು ಮತ್ತು ಅಂಗವಿಕಲತೆ ಉಂಟಾಗಲು ಕಾರಣಗಳು, ಆರ್‍ಪಿಡಿ ಕಾಯಿದೆಯ ಪ್ರಕಾರ ಇರುವ 21 ಅಂಗವಿಕಲತೆಗಳ ಗುರುತಿಸುವಿಕೆ, ಸಮನ್ವಯ ಶಿಕ್ಷಣದ ಪರಿಕಲ್ಪನೆ, ಅರ್ಥ ವ್ಯಾಪ್ತಿ ಮತ್ತು ಪ್ರಾಮುಖ್ಯತೆ, ಸಮನ್ವಯ ಶಿಕ್ಷಣದ ವಿಧಗಳು, ಸಾಧಿಸುವಲ್ಲಿ ಶಿಕ್ಷಕರ ಪಾತ್ರ, ಕಲಿಕಾ ಪ್ರಕ್ರಿಯೆ, ಸಂಪನ್ಮೂಲ ಬೆಂಬಲ ವ್ಯವಸ್ಥೆ, ಸಮನ್ವಯ ಶಾಲಾ ಶಿಕ್ಷಕರ ತರಗತಿ ನಿರ್ವಹಣೆ ಮತ್ತು ಪಾಠಯೋಜನೆ, ತರಬೇತಿ ನಂತರದ ಪರೀಕ್ಷೆ ಮತ್ತು ಹಿಂಮಾಹಿತಿಗಳ ಕುರಿತು ಕಾರ್ಯಗಾರದಲ್ಲಿ ತರಬೇತಿ ನೀಡಲಾಯಿತು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link