ತಿಪಟೂರು :
ನಗರದ ಗಾಂಧಿನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯನ್ನು ವಿಶೇಷವಾದ ವಾಹನಗಳಲ್ಲಿ ಅದ್ದೂರಿಯಾಗಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಹೊರಟು ಪೋಲೀಸರ ಮಾರ್ಗದರ್ಶನದಲ್ಲಿ ಕಾರೋನೇಷನ್ ರಸ್ತೆ, ರೈಲ್ವೇಸ್ಟೇಷನ್ ಮತ್ತು ಬಿ.ಹೆಚ್.ರಸ್ತೆಯ ಅಮಾನಿಕೆರೆಯಲ್ಲಿ ಸುರಕ್ಷಿತವಾಗಿ ವಿಸರ್ಜಿಸಲಾಯಿತು.
ನಗರದ ಹಿಂದೂ ಗಣಪತಿ ಎಂದೇ ಪ್ರಸಿದ್ದಿ ಪಡೆದಿರುವ ಗಾಂಧಿನಗರದ ಗಣಪತಿ ವಿಸರ್ಜನೆಯನ್ನು ಸುಮಾರು ನೂರಾರು ಭಕ್ತರೊಂದಿಗೆ ಪೋಲಿಸರೊಂದಿಗೆ ಬಿಗಿ ಭದ್ರತೆಯೊಂದಿಗೆ ಗಣಪತಿಯನ್ನು ಅದ್ದೂರಿ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು, ಈ ವೇಳೆ ಹಿಂದೂ ಕಾರ್ಯಕರ್ತರು ಜಯಘೋಷಗಳನ್ನು ಕೂಗುತ್ತ ನೃತ್ಯ ಮಾಡುತ್ತ ಮುಂದೆ ಸಾಗುತ್ತ ಇರುವ ದೃಶ್ಯ ಸಾಮಾನ್ಯವಾಗಿತ್ತು.
ಉತ್ಸವದ ವೇಳೆ ನಗರಸಭಾ ಸದಸ್ಯ ಸೊಪ್ಪು ಗಣೇಶ್, ಪತ್ರಕರ್ತರಾದ ಕಿರಣ್, ಶಿಕ್ಷಕರಾದ ಮಹೇಶ್ ಕುಮಾರ್, ಮುಖಂಡರಾದ ಶಶಿಕುಮಾರ್, ಲೋಕೇಶ್, ಜಗದೀಶ್, ಮಣಿ,ಪ್ರಶಾಂತ್ ಮೊದಲಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ