ಬೆಂಗಳೂರು:
ಸುಬ್ರಹ್ಮಣ್ಯಪುರ ಠಾಣೆಯ ರೌಡಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಡಾ.ಯಶಸ್ವಿನಿ ಗೌಡರನ್ನು ಶ್ರೀರಾಮಸೇನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಗೌಡ ಅವರು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮ್ಮುಖದಲ್ಲಿ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ರೌಡಿ ಪಟ್ಟಿಯಲ್ಲಿರುವ ಯಶಸ್ವಿನಿಗೌಡ ಅವರಿಗೆ ಶ್ರೀರಾಮಸೇನೆಯ ಜವಾಬ್ದಾರಿಯುತ ಅಧಿಕಾರ ಕೊಟ್ಟಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿದ್ದು ಇದಕ್ಕೆ ಯಶಸ್ವಿನಿ ಹಾಗೂ ಪ್ರಮೋದ್ ಮುತಾಲಿಕ್ ಸ್ಪಷ್ಟನೆ ನೀಡಿದ್ದಾರೆ.
ಪುಟ್ಟೇನಹಳ್ಳಿ ಠಾಣೆಯ ರೌಡಿ ಪಟ್ಟಿಯಲ್ಲಿರುವ ಮಹೇಶ್ ಅವರ ಎರಡನೇ ಪತಿಯಾಗಿರುವ ಯಶಸ್ವಿನಿ ಗೌಡ ಮೀಟರ್ ದಂಧೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ.
ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಖುಷಿಯಿದೆ. ನನ್ನನ್ನು ರೌಡಿ ಪಟ್ಟಿಗೆ ಸೇರಿಸಲು ಆರ್.ಟಿ.ನಗರದ ಅಂದಿನ ಇನ್ಸ್‍ಪೆಕ್ಟರ್ ಕಾರಣ. ಪ್ರಕರಣವೊಂದರಲ್ಲಿ ನಾನೇ ದೂರು ಕೊಟ್ಟು ಅವರನ್ನು ಸಸ್ಪೆಂಡ್ ಮಾಡಿಸಿದ್ದೆ. ಇದರಿಂದಲೇ ಅವರು ನನ್ನನ್ನು ರೌಡಿ ಪಟ್ಟಿಗೆ ಸೇರಿಸಲು ಕಾರಣರಾದರು ಎಂದು ಯಶಸ್ವಿನಿ ಗೌಡ ಹೇಳಿದ್ದಾರೆ.
ನಾನು ಯಾವ ಮಹಿಳೆಗೂ ಹೊಡೆದಿಲ್ಲ. ದೂರು ನೀಡಿದ್ದವರು ನ್ಯಾಯಾಲಯದಲ್ಲಿ ರಾಜಿಯಾಗಿದ್ದಾರೆ.ನನಗೆ ಯಾವುದೇ ಠಾಣೆಯಿಂದ ನೋಟಿಸ್ ಬಂದಿಲ್ಲ. ರೌಡಿಗಳೇನಾದರೂ ಸಮಾಜಸೇವೆ ಮಾಡಬಾರದು ಎನ್ನು ಕಾನೂನು ಇದೆಯೇ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ನನ್ನ ಮೇಲಿನ ಆರೋಪಗಳಿಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.
ಮುತಾಲಿಕ್ ಸ್ಪಷ್ಟನೆ: ರೌಡಿ ಯಶಸ್ವಿನಿ ಗೌಡ ಅವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದು ನಮ್ಮ ಸೇನೆಯ ಪದ್ಧತಿ ಪ್ರಕಾರ ನಡೆದಿದೆ. ರೌಡಿ ಅನ್ನೋದು ಒಂದು ಫ್ಯಾಷನ್ ಆಗಿದೆ. ಹಿಂದೂ ಸಂಘಟನೆ ಕೆಲವು ಕಾರ್ಯಕರ್ತರನ್ನು ಕೂಡ ರೌಡಿ ಪಟ್ಟಿಗೆ ಸೇರಿಸಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ
ನನ್ನ ಮೇಲೆಯೂ ಹಲವು ಕೇಸ್‍ಗಳಿದ್ದು ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಆರೋಪಿಯೆಂದು ಸಾಬೀತಾದರೆ ನಾವು ಅಂತಹವರನ್ನು ಹುದ್ದೆಯಿಂದ ಕೆಳಗೆ ಇಳಿಸುತ್ತೇವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
