ಹೊಳಲ್ಕೆರೆ;
ಲಿಂ| ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವ ಹಮ್ಮಿಕೊಳ್ಳುವ ಕುರಿತಂತೆ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಭಕ್ತರ ಸಹಕಾರದೊಂದಿಗೆ ಇಲ್ಲಿ ಮಹಾದ್ವಾರ ನಿರ್ಮಾಣವಾಗುತ್ತಿದ್ದು, ರಾಜ್ಯಸರ್ಕಾರದ ಸಹಕಾರದಿಂದ ಬಸವ ಭವನ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಭಾಗದ ಜನರು ಬಸವ ಭವನವನ್ನು ಬಳಸಿಕೊಳ್ಳಬಹುದು. ಹಾಗು ಯಾತ್ರಿನಿವಾಸ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದರು.
ಎಲ್.ಬಿ. ರಾಜಶೇಖರ್ ಮಾತನಾಡಿ, ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರವಾದುದು. ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಮಠವಾಗಿದೆ. ಅಕ್ಟೋಬರ್ ತಿಂಗಳ 21ನೇ ತಾರೀಕು ಮಲ್ಲಿಕಾರ್ಜುನ ಸ್ವಾಮಿಗಳ ಸ್ಮರಣೋತ್ಸವ ನಡೆಯಲಿದ್ದು, ಎಲ್ಲರೂ ಕೈಜೋಡಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದರು.
ರಾಮಗಿರಿ ರಾಮಣ್ಣ ಮಾತನಾಡಿ, ಮುರುಘಾಮಠಕ್ಕೆ ಪ್ರೀತಿಯ ವಂಶ ಪಾಳೇಗಾರರ ವಂಶ. ಹಿಂದಿನಿಂದಲೂ ನಾವು ಅದನ್ನು ಉಳಿಸಿಕೊಂಡು ಬಂದಿದ್ದೇವೆ. ಶ್ರೀಮಠವು ಸಹ ನಮ್ಮ ಸಮಾಜಕ್ಕೆ ಯಾವತ್ತೂ ಆಶೀರ್ವಾದ ನೀಡುತ್ತಿದೆ. ನಾವು ಯಾವತ್ತು ಶ್ರೀಮಠಕ್ಕೆ ಅಭಾರಿಯಾಗಿರುತ್ತೇವೆ ಎಂದರು.
ವಕೀಲರಾದ ಆನಂದಮೂರ್ತಿ ಮಾತನಾಡಿ, ಶ್ರೀಮಠವು ಕೇಂದ್ರದ ಅನುದಾನವನ್ನು ತೆಗೆದುಕೊಳ್ಳಬೇಕು ಅಲ್ಲದೇ ಕಾರ್ಯಕ್ರಮಕ್ಕೆ ಆದಿತ್ಯನಾಥ್ ಅವರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
ಶರಣಸಂಸ್ಕತಿ ಉತ್ಸವ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್ ಮಾತನಾಡಿದರು. ಸಭೆಯಲ್ಲಿ ಜಗದೀಶ್, ಮೋಹನ್ ಶಿವಕುಮಾರ್, ಕೆ.ಆರ್. ಶಿವಪ್ರಕಾಶ್ ಮುಂತಾದವರಿದ್ದರು.ಮಹಾರುದ್ರಯ್ಯ ಪ್ರಾರ್ಥಿಸಿದರು. ಮುರುಗೇಶ್ ಪ್ರಾರಂಭದಲ್ಲಿ ಸ್ವಾಗತಿಸಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ