ರಾಜಕೀಯ ಕ್ಷೇತ್ರದ ಧೀಮಂತ ವ್ಯಕ್ತಿ ಡಿ.ಕೆ.ಶಿವಕುಮಾರ್‍ರವರ ಹುಟ್ಟು ಹಬ್ಬ ಆಚರಣೆ.

0
5

ಚಳ್ಳಕೆರೆ

      ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹಲವಾರು ದಶಕಗಳಿಂದ ತನ್ನದೇಯಾದ ವಿಶೇಷ ಪ್ರಾಬಲ್ಯವನ್ನು ಹೊಂದಿರುವ ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಪರಿಹಾರವನ್ನು ಕಂಡುಕೊಳ್ಳುವ ಟ್ರಬಲ್ ಶೂಟರ್ ಎಂದು ಖ್ಯಾತಿಯಾದ, ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‍ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬುಧವಾರ ಇಲ್ಲಿನ ಶ್ರೀಮಾನ್ ವೃದ್ಧಾಶ್ರಮ ವೃದ್ದರಿಗೆ ಹಣ್ಣು, ಉಪಹಾರ ಹಾಗೂ ಸಿಹಿ ನೀಡುವ ಮೂಲಕ ಸರಳವಾಗಿ ಆಚರಿಸಿದರು.

       ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಯುವ ಕಾಂಗ್ರೆಸ್ ದುರೀಣ ಪುರುಷೋತ್ತಮ ನಾಯ್ಕ, ಸಚಿವ ಡಿ.ಕೆ.ಶಿವಕುಮಾರ್‍ರವರ ಅಭಿಮಾನಿಗಳಾದ ನಾವು ಮುಂಬರುವ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಶುಭಹಾರೈಸಿ ಇಲ್ಲಿನ ವೃದ್ದಾಶ್ರಮದ ವೃದ್ದರಿಗೆ ಹಣ್ಣು, ಸಿಹಿ ನೀಡಿ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಮುಂಬರುವ ವರ್ಷಗಳಲ್ಲೂ ಸಹ ಇವರ ಹುಟ್ಟು ಹಬ್ಬವನ್ನು ನಾವು ಆಚರಣೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆಂದರು. ಈ ಸಂದರ್ಭದಲ್ಲಿ ವಿಶ್ವನಾಥ್, ಸುನಾಗ್, ದೇವಿಪುತ್ರ, ಪಾಪಣ್ಣ, ಹರೀಶ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here