ಬಾಲಗಣೇಶನಿಗೆ ಮಹಾಪೂಜೆ

ಶಿಗ್ಗಾವಿ :

        ಎಲ್ಲ ಸಮಾಜಗಳೂ ಒಗ್ಗೂಡಿ ಆಚರಿಸುವ ಹಬ್ಬ ಗಣೇಶ ಚತುರ್ಥಿಯಾಗಿದ್ದು ಭಾರತೀಯ ಸಂಸ್ಕತಿಯ ಜೀವನದ ಎಲ್ಲ ಶುಭ ಸಮಾರಂಭಗಳಲ್ಲಿಯೂ ಮೊದಲ ಪೂಜೆಯನ್ನು ವಿಘ್ನಗಳ ನಿವಾರಕ ವಿಘ್ನೇಶ್ವರನಿಗೆ ಸಲ್ಲಿಸಲಾಗುತ್ತದೆ ಎಂದು ಭರತ ಸೇವಾ ಸಂಸ್ಥೆ ಅದ್ಯಕ್ಷ ಹಾಗೂ ತಾಲೂಕಾ ಗುತ್ತಿಗೆದಾರರ ಸಂಘದ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

        ಪಟ್ಟಣದ ಗಾಂಧಿನಗರದಲ್ಲಿ ಶ್ರೀ ಬಾಲಗಣೇಶ ಸೇವಾ ಸಮೀತಿ ವತಿಯಿಂದ ಪ್ರತಿಷ್ಟಾಪಿಸಿರುವ ಬಾಲಗಣೇಶನಿಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದ ನಂತರ ನಡೆದ ವೇಧಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ 17 ವರ್ಷಗಳಿಂದ ಯಾವುದೇ ಎಡರು ತೊಡರುಗಳಿಲ್ಲದೆ ಸಂಘಟನೆಯ ಮೂಲಕ ಸ್ವತಹ ಯುವಕರು ಗಣೇಶನನ್ನು ಪ್ರತಿಷ್ಟಾಪಿಸುತ್ತಾ ಬಂದು ಮಕ್ಕಳ ಪ್ರತಿಭೆಗಳನ್ನು ಹೊರಹೊಮ್ಮಿಸುವ ನಿಟ್ಟಿನಲ್ಲಿ ಪ್ರತಿದಿನ ವಿವಿಧ ಸಂಸ್ಕತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಪ್ರೋತ್ಸಾಹ ನೀಡುತ್ತ ಬರುತ್ತಿರುವುದು ಸಂಘಟನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರಲ್ಲದೆ ಆ ಗಣೇಶ ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯ ವಿಚಾರಗಳನ್ನು ನೀಡಿ ಶಿಗ್ಗಾವಿ ಪಟ್ಟಣಕ್ಕೆ ಮಾದರಿಯಾಗುವ ಸಂಘಟನೆ ಈ ಗಾಂಧಿನಗರದ ಗಣೇಳೀ ಶ್ರೀ ಬಾಲ ಗಣೇಶ ಸೇವಾ ಸಮೀತಿಯಯವರಿಗೆ ನೀಡಲಿ ಎಂದು ಹಾರೈಸಿದರು.

       ಸಾಹಿತಿ ಹಾಗೂ ಭಾಜಪ ಮುಖಂಡ ಶಿವಾನಂದ ಮ್ಯಾಗೇರಿ ಮಾತನಾಡಿ ಜೀವನ ಎಂಬ ಮೂರು ಅಕ್ಷರಗಳನ್ನು ಹೊಂದಿಸುತ್ತ ಗಣೇಶ ಎಂಬ ಮೂರಕ್ಷರ ಮಹಿಮೆಯನ್ನು ವಿವರಣಾಪೂರ್ವಕವಾಗಿ ಎಳೆಯಳೆಯಾಗಿ ವಿವರಿಸುತ್ತ ನೆರೆದ ಜನರನ್ನು ರಂಜಿಸಿದರು.
ಸಾನಿದ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.

       ಕಾರ್ಯಕ್ರಮದಲ್ಲಿ ಕಳೆದ 10 ದಿನಗಳ ಕಾಲ ನಡೆದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ನಗರದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

         ಪುರಸಭೆ ಉಪಾದ್ಯಕ್ಷ ಪರಶುರಾಮ ಸೊನ್ನದ್, ಕ್ರಿಕೆಟ್ ಸ್ಪೋಟ್ರ್ಸ ಕ್ಲಬ್ ಅದ್ಯಕ್ಷ ಉಮೇಶ ಗೌಳಿ, ವಾರ್ಡಿನ ಸದಸ್ಯೆ ವೀಣಾ ಕುರ್ಡೇಕರ, ಫಕ್ಕೀರೇಶ ಶಿಗಾವಿ, ಶೇಖಪ್ಪ ಗುಳೇದ, ಫಿರೋಜ್ ಕಾಮನಹಳ್ಳಿ, ಮಾರುತಿ ರಾಯ್ಕರ್, ಶಿಕ್ಷಕಿ ಶ್ರೀಮತಿ ಚಕ್ರಸಾಲಿ, ಶೋಭಾ ಅಳಗವಾಡಿ ಸೇರಿದಂತೆ ವಾರ್ಡಿನ ಹಿರಿಯರು ಹಾಗೂ ಬಾಲ ಗಣೇಶ ಸೇವಾ ಸಮೀತಿಯ ಸರ್ವಸದಸ್ಯರು ಹಾಜರಿದ್ದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link