ವೇಶ್ಯಾವಾಟಿಕೆ ದಂಧೆ ಇಬ್ಬರು ಅಂದರ್

ಬೆಂಗಳೂರು

     ಹೆಚ್ಚಿನ ವೇತನದ ಉದ್ಯೋಗ ಕೊಡಿಸುವ ನೆಪದಲ್ಲಿ ಪಶ್ಚಿಮ ಬಂಗಾಳದ ಯುವತಿಯರನ್ನು ಕರೆ ತಂದು ಮಡಿವಾಳದ ಟೀಚರ್ಸ್ ಕಾಲನಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.

      ದಂಧೆ ನಡೆಸುತ್ತಿದ್ದ ಆರ್ ಟಿ ನಗರದ ತಾಹಿರ್ ಅಹ್ಮದ್ (35), ಹೊಳೆನರಸೀಪುರದ ರಘು (28) ನನ್ನು ಬಂಧಿಸಿ 11 ಸಾವಿರ ನಗದು, ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡು ಪಶ್ಚಿಮ ಬಂಗಾಳದ ಮೂವರು ಸೇರಿ, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

      ಆರೋಪಿಗಳು ಮಡಿವಾಳದ ಟೀಚರ್ಸ್ ಕಾಲನಿಯ ಮನೆಯೊಂದನ್ನು ಬಾಡಿಗೆ ಪಡೆದು ಹೊರ ರಾಜ್ಯದಿಂದ ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ಮೊಬೈಲ್ ನಲ್ಲಿ ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.

 

Recent Articles

spot_img

Related Stories

Share via
Copy link