ಮೈಸೂರು:
ಚಲನಚಿತ್ರ ನಟ ದರ್ಶನ್ ಕಾರು ಅಪಘಾತಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಪೊಲೀಸರ ನಡೆಗೆ ತೀವ್ರ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಸೆಪ್ಟೆಂಬರ್ 23 ರಂದು ಚಿತ್ರನಟ ದರ್ಶನ್ ಅವರ ಕಾರು ಮೈಸೂರಿನ ಹಿನಕಲ್ ಬಳಿ ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಬಲಗೈಗೆ ಬಳೆಯು ಒತ್ತಿರುವುದರಿಂದ ಕೈನ ಮೂಳೆಯು ಮುರಿದು ಮೈಸೂರಿನ ಅಪೊಲೋ ಏಷಿಯಾ ಆಸ್ಪತ್ರ್ರೆಗೆ ದಾಖ ಲಾಗಿದ್ದರು.ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜತೆಯಲ್ಲಿದ್ದವರ ಹೇಳಿಕೆಯನ್ನು ಪಡೆಯಲಾಗಿತ್ತು. ಆದರೆ, ದರ್ಶನ್ ಅವರ ಹೇಳಿಕೆಯನ್ನು ಪಡೆಯದ ಪೊಲೀಸರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ, ದರ್ಶನ್ ಅವರು ಮಾನಸಿಕವಾಗಿ ಚೆನ್ನಾಗಿದ್ದರೂ ಕೂಡಾ ಹೇಳಿಕೆ ಪಡೆಯದ ಪೊಲೀಸರ ಮರ್ಮವೇನು ? ಎಂದು ಬಾರಿ ಕುತೂಹಲ ಮೂಡಿಸಿದೆ.
ಅಪಘಾತಕ್ಕೂ ಮುನ್ನ ದರ್ಶನ್ ಅವರು ಚಲನಚಿತ್ರನಟ ದೇವರಾಜ್ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಹೊಟೇಲ್‍ನಲ್ಲಿ ಮುಗಿಸಿ, ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಜನರಲ್ಲಿ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ