ಕನಸಿನ ಹುದ್ದೆಯನ್ನು ನೋಟ್‍ಬುಕ್‍ನಲ್ಲಿ ನಮೂದಿಸಿ: ಡಿಸಿ

ಬಳ್ಳಾರಿ:

    ತಾವು ಮುಂದೆ ಸಾಧಿಸುವ ಕನಸಿನ ಹುದ್ದೆಯನ್ನು ನೋಟ್ ಬುಕ್‍ನಲ್ಲಿ ಆ ಹುದ್ದೆಯೊಂದಿಗೆ ತಮ್ಮ ಹೆಸರನ್ನು ಬರೆದಿಟ್ಟುಕೊಳ್ಳಿ. ಅದನ್ನು ಸದಾ ನೋಡುತ್ತೀರಿ; ಇದರಿಂದ ಆ ಹುದ್ದೆಗೇರುವ ನಿಟ್ಟಿನಲ್ಲಿ ಮನಸ್ಸಿನ ಮೇಲೆ ಸಕರಾತ್ಮಕ ಪರಿಣಾಮಗಳು ಬೀರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.

     ಕಮಲಾಪುರದ ಸುಜಯ್ ಇನ್‍ಸ್ಟಿಟ್ಯೂಟ್ ಸ್ಕೂಲ್‍ನಿಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯ ಕಾರ್ಯವೈಖರಿ ತಿಳಿದುಕೊಳ್ಳುವ ಕುತೂಹಲದಿಂದ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಭೇಟಿ ನೀಡಿದಾಗ ಮಕ್ಕಳೊಂದಿಗೆ ಸಂವಾದ ನಡೆಸಿ ಅವರಿಗೆ ಸಲಹೆ ನೀಡಿದರು.

     ತಮಗೆ ಪೋಷಕರು ನೀಡುವ ಒಂದೊಂದು ರೂಪಾಯಿಯನ್ನು ಹಾಗೆಯೇ ಸಂಗ್ರಹಿಸಿ(ಹುಂಡಿ ರೂಪದಲ್ಲಿ) ತಮ್ಮ ಶಿಕ್ಷಣಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ; ಚಾಕ್ಲೆಟ್ ತಿಂದರೇ ಡಿಸಿ ಹಾಗಲ್ಲ ಎಂದರು.ತಮ್ಮ ಬಾಲ್ಯಜೀವನದ ಕುರಿತು ವಿವರವಾಗಿ ಮಕ್ಕಳಿಗೆ ತಿಳಿಹೇಳಿದ ಡಿಸಿ ರಾಮ್ ಪ್ರಸಾತ್ ಅವರು, ತಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಸಲಹಾತ್ಮಕ ರೂಪದಲ್ಲಿ ಅವರು ವಿವರಿಸಿದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link