ಬ್ಯಾಡಗಿ:
ಹೆಚ್ಚುತ್ತಿರುವ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ್ಯೂ ಭಾರತ ಟ್ಯಾಕ್ಸಿ ಮತ್ತು ಕಾರ್ ಮಾಲಿಕರು ಹಾಗೂ ಚಾಲಕರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು..
ಬೆಳಿಗ್ಗೆ ಪಟ್ಟಣದ ಗುಮ್ಮನಹಳ್ಳಿ ರಸ್ತೆಯಲ್ಲಿರುವ ಟ್ಯಾಕ್ಸಿ ನಿಲ್ದಾಣದಿಂದ ಆರಂಭವಾದ ಪ್ರತಿಭಟನೆ ನಂತರ ಹಳೆ ಪುರಸಭೆ ಮುಖ್ಯ ರಸ್ತೆ, ಸುಭಾಸ್ ಸರ್ಕಲ್ ಮೂಲಕ ಸಾಗಿತು. ಈ ಸಂದರ್ಬದಲ್ಲಿ ಕೇಂದ್ರ ಚಾಲಕರು ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ಯಾಕ್ಸಿ ಚಾಲಕರ ಸಂಘದ ತಾಲೂಕಾಧ್ಯಕ್ಷ ವಿನಯ ವರ್ಣೇಕರ ಕಳೆದ ಕೆಲ ದಿನಗಳಿಂದ ಬೆಲೆ ಎರಿಕೆ ದಿನದಿನಕ್ಕೆ ಗಗನಕ್ಕೇರುತ್ತಿದೆ. ಬೆಲೆ ಎರಿಕೆಯಿಂದಾಗಿ ವಾಹನ ಚಾಲನೆಯನ್ನೆ ವೃತ್ತಿಯನ್ನಾಗಿಸಿ ಕೊಂಡಿರುವ ನಾವುಗಳು ಕೆಲಸವಿಲ್ಲದೇ ಕೂರುವಂತಾಗಿದ್ದು ಜೀವ ನ ನಿರ್ವಹಣೆ ಮಾಡುವುದು ದುಸ್ಥರವಾಗಿದೆ. ಅಲ್ಲದೇ ಪೆಟ್ರೋಲ್ ಡಿಸೆಲ್ ಬೆಲೆ ಎರಿಕೆ ಯಿಂದ ದಿನನಿತ್ಯದ ವಸ್ತಗಳ ಬೆಲೆಗಳು ಕೂಡಾ ಎರಿಕೆ ಕಂಡಿದ್ದು ಜನ ಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ತೈಲ ಬೆಲೆಯನ್ನು ಇಳಿಸಿ ಎಂದರೆ ರಾಜ್ಯ ಸರಕಾರ ಕೇಂದ್ರದ ಕಡೆಗೆ ಬೆಟ್ಟು ಮಾಡಿ ತೋರಿಸಿದರೆ ಕೇಂದ್ರ ರಾಜ್ಯದ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಿದೆ ಇಬ್ಬರ ಜಗಳದಲ್ಲಿ ಸಾರ್ವಜನಿಕರು ಪರದಾಡುತ್ತಿದ್ದು ಕೂಡಲೇ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿದರು..
ರವಿ ಹುಣಸಿಮರದ ಮಾತನಾಡಿ, ಕಾರ್ ಟ್ಯಾಕ್ಸಿ ಚಾಲಕರು ಹಗಲಿರುಳೆನ್ನೆದ ಸಾರ್ವಜನಿಕರ ಸೇವೆಯಲ್ಲಿ ತೋಡಗಿದ್ದೇವೆ ಅಲ್ಲದೇ ನಾವುಗಳು ಆರ್ಥಿಕವಾಗಿ ಹಿಂದುಳಿ ದಿದ್ದು ನಿತ್ಯ ಜೀವದ ಜೊತೆ ಹೋರಾಡುತ್ತೇವೆ. ಇಷ್ಟೆಲ್ಲ ಆದರೂ ಆದರೆ ನಮ್ಮಗಳ ಬದುಕಿಗೆ ಮಾತ್ರ ಯಾವುದೇ ಭದ್ರತೆ ಇಲ್ಲ ಇದರಿಂದ ಅಕಸ್ಮಾತ ಆಗಿ ಎನಾದರೂ ಅನಾಹುತ ಸಂಭವಿಸಿದರೆ ನಮ್ಮ ಕುಟುಂಬ ಬೀದಿಗೆ ಬೀಳು ವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರಕಾರ ಅಪಘಾತದಲ್ಲಿ ಮಡಿದ ಚಾಲಕರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ಆಗ್ರಹಿಸಿದರು..
ಈ ಸಂದರ್ಬದಲ್ಲಿ ಬಸವರಾಜ ಹಮಾಪುರ ಸಲೀಂ ಯಾದವಾಡ, ಮಂಜುನಾಥ ಕೊರವಾಡ, ಗಣೇಶ ವಡ್ಡರ, ಸೇರಿದಂತೆ ಇನ್ನಿತ ರರು ಉಪಸ್ಥಿತರಿದ್ದರು.