ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ

ಹಾವೇರಿ:

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ ಅಭಿಯಾನದ ನಾಲ್ಕನೇಯ ವಾರ್ಷಿಕೋತ್ಸವ ನಿಮಿತ್ಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮಂಗಳವಾರ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜರುಗಿತು.

      “ಸ್ವಚ್ಛತೆಯೇ ಸೇವೆ” ಎಂಬ ಘೋಷ ವ್ಯಾಕ್ಯದೊಂದಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಟಿ.ನಾಗರಾಜ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು ಸೇರಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಆಸ್ಪತ್ರೆಯ ಒಳಾಂಗಣ ಆವರಣವನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಛತೆಯ ಅರಿವು ಹಾಗೂ ಸ್ವಚ್ಛ ಭಾರತ ಅಭಿಯಾನದ ಮಹತ್ವವನ್ನು ಎಲ್ಲರಿಗೂ ತಿಳಿಯ ಪಡಿಸಿದರು.

        ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಟಿ. ನಾಗರಾಜ ನಾಯ್ಕ ಅವರು ಮಾತನಾಡಿ, ಆಸ್ಪತ್ರೆಯ ಸುತ್ತಮುತ್ತಲಿನ ಆವರಣವನ್ನು ಹಾಗೂ ಆಸ್ಪತ್ರೆಯ ಒಳಗಡೆ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

         ಇದೇ ಸಂದರ್ಭದಲ್ಲಿ ನಾನು ಸ್ವಚ್ಛತೆಯ ಕಡೆಗೆ ಬದ್ಧನಾಗಿರುತ್ತೇನೆ, ನಾನು ಸ್ವಚ್ಛತೆಗೋಸ್ಕರ ಪ್ರತಿವಾರ 2 ಗಂಟೆಗಳನ್ನು ವಿನಿಯೋಗಿಸುತ್ತೇನೆ, ನಾನು ಗಲೀಜು ಮಾಡುವುದಿಲ್ಲ, ಬೇರೆಯವರಿಗೂ ಗಲೀಜು ಮಾಡಲು ಬಿಡುವುದಿಲ್ಲ ಸ್ವಚ್ಛ ಭಾರತ ಅಭಿಯಾನದ ಸಂದೇಶವನ್ನು ಗ್ರಾಮ ಮತ್ತು ಪಟ್ಟಣಗಳಲ್ಲಿ ಸಾರುವೆನು ಎಂಬ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.

         ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸ್ಥಾನಿಕ ವೈದ್ಯಾದಿಕಾರಿಗಳಾದ ಡಾ. ಸುರೇಶ ಪೂಜಾರ, ಆಡಳಿತಾಧಿಕಾರಿ ಎಫ್.ಎಮ್. ಸಾಲಿಮಠ, ಡಾ. ಜಯಲಕ್ಷ್ಮೀ, ಡಾ. ವಿಠಲ ದಾಸರ, ಜಿಲ್ಲಾ ಕನ್ಸ್‍ಲ್ಟಂಟ್ ಕ್ವಾಲಿಟಿ ಅಶ್ಯೂರೆನ್ಸ್ ಶ್ರೀಧರ ಬೆಂಗೇರಿ, ಶಂಭು ಬಣಕಾರ, ಶುಶ್ರೂಷಕ ಅಧೀಕ್ಷಕಿ ಶ್ರೀಮತಿ ನಾಗವೇಣಿ, ಶ್ರೀಮತಿ ರಾಜೇಶ್ವರಿ ಭಟ್, ಶ್ರೀಮತಿ ರೇಣುಕಾ ಹೊಸಮನಿ, ರವಿಕಾಂತ ಮಾಂಡ್ರೆ, ರಾಮಚಂದ್ರ ಕುದರಿ, ಶ್ರೀಮತಿ ಶಿಲಾ ಡಾನ್ಸನ್, ಶ್ರೀಮತಿ ಚೆನ್ನಮ್ಮ ಹಾಗೂ ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿನಿಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link