ಹುಬ್ಬಳ್ಳಿ:
ನಮ್ಮ ರಾಜ್ಯದಲ್ಲಿ ಅತಿವೃಷ್ಠಿ ಒಂದು ಕಡೆಯಾದರೆ ಅನಾವೃಷ್ಠಿ ಇನ್ನೊಂದು ಕಡೆ ತಾಂಡವ ಆಡುವಾಗ ನಮ್ಮ ರಾಜ್ಯಕ್ಕೆ ವರದಾನ ವಾಗಿರುವ ನದಿಗಳ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಡಿಕೆಶಿ ಅವರು ಕಣಕುಂಬಿಗೆ ಇಂದು ಭೇಟಿ ನೀಡುತ್ತಿದ್ದೇನೆ. ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ . ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದೆ ಎಂದು ತಿಳಿಸಿದ್ದಾರೆ . ಮಹಾದಾಯಿ ವಿಚಾರವಾಗಿ ನಾವು ಮತ್ತೆ ಕೋರ್ಟ್ ಮುಂದೆ ಹೋಗುತ್ತೇವೆ. ನ್ಯಾಯಾಧೀಕರಣ ತೀರ್ಪು ಬಂದು ತಿಂಗಳುವರೆಗೆ ನಾವು ಸುಮ್ಮನೆ ಕುಳಿತಿಲ್ಲ. ಕಾನೂನು ತಂಡ ಮತ್ತು ತಾಂತ್ರಿಕ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.
ಕಾವೇರಿ ನದಿ ಪಾತ್ರಕ್ಕೆ ಕೊಡುವಷ್ಟು ಕಾಳಜಿಯನ್ನು ಮಹಾದಾಯಿಗೆ ತೋರುತ್ತಿಲ್ಲ ಎಂಬುವು ಸತ್ಯಕ್ಕೆ ದೂರವಾಗಿರುವ ಮಾತುಗಳು ಎಂದು ಸ್ಪಷ್ಟಪಡಿಸಿದರು . ನಮಗೆ ಮಹದಾಯಿ ವಿಚಾರದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಇಂದಿನ ಭೇಟಿ ಬಳಿಕ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು ಎಂದು ಇದೇ ವೇಳೆ ಸಚಿವ ಡಿಕೆಶಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ