ದಾವಣಗೆರೆ:
ಬುಧವಾರ ಸಂಜೆ ದಿಢೀರ್ ಸುರಿದ ಭಾರೀ ಮಳೆಯಿಂದಾಗಿ, ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ರಸ್ತೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿತ್ತು.
ನಗರದ ತಗ್ಗು ಪ್ರದೇಶದಲ್ಲಿರುವ ಜಾಲಿ ನಗರ, ಶೇಖರಪ್ಪ ನಗರ, ಇಡಬ್ಲ್ಯುಎಸ್ ಕಾಲೋನಿ, ಭಾರತ್ ಕಾಲೋನಿ, ಶಿವ ನಗರ, ಭಾಷ ನಗರ, ವಿನೋಬ ನಗರ, ನೀಲಮ್ಮನ ತೋಪು, ಚಿಕ್ಕನಹಳ್ಳಿ ಬಡಾವಣೆ, ಆಜಾದ್ ನಗರ, ಬೇತೂರು ರಸ್ತೆ, ಎಸ್‍ಪಿಎಸ್ ನಗರ, ಚೌಡೇಶ್ವರಿ ನಗರ, ಎಸ್.ಎಂ. ಕೃಷ್ಣ ನಗರ, ದೇವರಾಜ ಅರಸು ಬಡಾವಣೆಯ ಎ ಬ್ಲಾಕ್ ಸೇರಿದಂತೆ ಹಲವು ಪ್ರದೇಶಗಳ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ಅಲ್ಲಿಯ ನಿವಾಸಿಗಳು ಮನೆಯಲ್ಲಿ ತುಂಬಿದ್ದ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇನ್ನೂ ವಿನೋಬ ನಗರದ ರಸ್ತೆ, ಜಾಲಿ ನಗರದ ರಸ್ತೆ, ಅಶೋಕ ರಸ್ತೆ, ವಸಂತ ಟಾಕೀಸ್ ಅಂಡರ್ ಬಿಡ್ಜ್, ಶಿವಾಲಿ ರಸ್ತೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡ ಕಾರಣ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








