ನ್ಯುಯಾರ್ಕ್:
ಪಾಕಿಸ್ತಾನ ಆರ್ಥಿಕ ದಿವಾಳಿಯಾದ ವಿಷಯ ಈಗ ಜಗತ್ತಿಗೆ ಗೊತ್ತಿದೆ ಈಗ ಪಾಕಿಸ್ತಾನ ಸುಳ್ಳು ಹೇಳುವುದನ್ನು ರೂಡಿಸಿಕೊಂಡಂತೆ ಕಾಣುತ್ತಿದೆ ಪಾಕಿಸ್ತಾನದ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಸಭೆಯ ವೇಳೆ ಟ್ರಂಪ್ ಅವರಿಗೆ ಕೊಟ್ಟ ಒಂದು ಶೇಕ್ ಹ್ಯಾಂಡ್ ಅನ್ನೆ ಅವರು ನಾವು ಅಮೇರಿಕಾ ಅಧ್ಯಕ್ಷರ ಜೊತೆಗೆ ಅನೌಪಚಾರಿಕವಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿಯ ಕುರಿತು ಚರ್ಚೆ ನಡೆಸಿದ್ದೇವೆ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ವಿಶ್ವಸಂಸ್ಥೆಯ ಸಭೆಗೂ ಮುನ್ನ ಭಾರತದೊಂದಿಗೆ ನಿಗದಿಯಾಗಿದ್ದ ದ್ವಿಪಕ್ಷೀಯ ಮಾತುಕತೆ ಪಾಕಿಸ್ತಾನದ ಕೀಳು ಬುದ್ದಿವಂತಿಕೆಯಿಂದ ಮುರಿದುಬಿದ್ದಿದ್ದು ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟಾಗಿತ್ತು. ಈ ನಡುವೆ ಅಮೆರಿಕಾ ಅಧ್ಯಕ್ಷರನ್ನು ಭೇಟಿ ಮಾಡಿ ಅಮೆರಿಕ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧದ ಬಗ್ಗೆ ಅನೌಪಚಾರಿಕ ಮಾತುಕತೆ ನಡೆಸಿದ್ದೆವೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವರು ಹೇಳಿದ್ದರು. ಆದರೆ ಪಾಕ್ ವಿದೇಶಾಂಗ ಸಚಿವರ ಹೇಳಿಕೆಗೆ ವ್ಯತಿರಿಕ್ತವಾಗಿ ಶ್ವೇತ ಭವನ ಹೇಳಿಕೆ ನೀಡಿದ್ದು, ಟ್ರಂಪ್- ಪಾಕ್ ವಿದೇಶಾಂಗ ಸಚಿವರ ಭೇಟಿ ಹಸ್ತಲಾಘವಕ್ಕೆ ಅಷ್ಟೇ ಸೀಮಿತವಾಗಿತ್ತು ಎಂದು ಸ್ಪಷ್ಟನೆ ನೀಡಿದೆ.ಿದರಿಂದ ಪಾಕಿಸ್ತಾನ ಬರಿಯ ಸುಳ್ಳು ಹೇಳುತ್ತದೆ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/5baa8bc046296.gif)