ಯೋಧರ ನೆನಪಿಗಾಗಿ ಶೌರ್ಯ ದಿವಸ್ ಆಚರಣೆ!!

ಸಿರಿಗೇರಿ

       ಗ್ರಾಮದ ದಿ:ಮಂಜುನಾಥ ಸ್ಮಾರಕದಲ್ಲಿ ಶೌರ್ಯ ದಿವಸ್ ಅಂಗವಾಗಿ ಸಿರುಗುಪ್ಪ ತಾಲೂಕು ಬಿಜೆಪಿ ಘಟಕ ವತಿಯಿಂದ ಶನಿವಾರ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

        ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಎಂ.ಎಸ್.ದೊಡ್ಡ ಸಿದ್ದಪ್ಪ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಲಸ್ಕರ್ ಶೇಕಪ್ಪ “ ದೇಶದ ಗಡಿ ಭಾಗದಲ್ಲಿ ನಾನಾ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮೃತಪಟ್ಟಿದ್ದಾರೆ. ಅಂತಹವರ ಸ್ಮರಣೆ ಮರೆಯಲಾಗದ ಗುರುತರ ಕರ್ತವ್ಯ.

      ಸೆ,28 2016ರ ಮಧ್ಯರಾತ್ರಿ ಭಾರತೀಯ ಸೇನಾಪಡೆ ಪಾಕ್ ಭಯೋತ್ಪಾದರ ನೆಲೆಗಳ ಮೇಲೆ ಸರ್ಜಿಕಲ್ ಹೋರಾಟವನ್ನು ಯಶಶ್ವಿಯಾಗಿ ನಡೆಸಿ ಭಯೋತ್ಪಾದರ ಅಟ್ಟಹಾಸವನ್ನು ಮಟ್ಟ ಹಾಕಿ ದೇಶದ ಹಿತ ಕಾಪಾಡಿದ್ದು ಇತಿಹಾಸದ ಮೈಲುಗಲ್ಲು. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಪ್ರೇರಣೆಯಾಗಿದೆ ಎಂದರು. ತದ ನಂತರ ಎಪಿಎಂಸಿ ಸದಸ್ಯ ಹಾಗಲೂರು ಮಲ್ಲನಗೌಡ ಮಾತನಾಡಿ “ ಭಾರತ ಸಂಸ್ಕತಿ ಹಾಗೂ ನೆಲದ ಗುಣಕ್ಕೆ ನಾನಾ ವರ್ಷಗಳ ಇತಿಹಾಸವಿದೆ. ಇಂತಹಾ ದೇಶದ ಅಳಿವು ಉಳಿವು ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದರು.

      ತದ ನಂತರ ಯೋಧ ದಿ:ಮಂಜುನಾಥಗೌಡರ ಸ್ಮಾರಕಕ್ಕೆ ನಮನ ಸಲ್ಲಿಸಿ ಸ್ವಚ್ಛತಾ ಕಾರ್ಯ ನಡೆಸಿದರು.ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಕೊಳ್ಳಿ ಪವಾಡಿನಾಯ್ಕ, ವೀರಭದ್ರಗೌಡ, ರಮೇಶ್ ಭಜಂತ್ರಿ, ಚಾನಾಳ್ ನಾಗೇಂದ್ರ, ಶ್ರೀರಾಮ್, ತಾಳೂರು ಈರಣ್ಣ, ಬೈರಾಪುರ ಹನ್ಮಂತಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link