ರಪೇಲ್ ಹಗರಣ ಖಂಡಿಸಿ ಯುವ ಕಾಂಗ್ರೆಸ್ ನಿಂದ ಬೈಕ್ ಜಾಥಾ

ದಾವಣಗೆರೆ:

     ರಫೇಲ್ ಯುದ್ದ ವಿಮಾನ ಖರೀದಿ ಹಗರಣ ಹಾಗೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೈಕ್ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.

      ಬ್ಯಾಕ್ ರ್ಯಾಲಿ ಮೂಲಕ ನಗರದ ಹಲವೆಡೆ ಸಂಚರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಜಮಾಯಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೀಂದ್ರ ದಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ, ಉಪಾಧ್ಯಕ್ಷರುಗಳಾದ ಅಮೃತ್‍ಗೌಡ, ಶಿವಕುಮಾರ, ಜಿಲ್ಲಾಧ್ಯಕ್ಷ ಸೈಯದ್ ಖಾಲಿದ್ ಅಹಮ್ಮದ್ ಅವರುಗಳ ನೇತೃತ್ವದಲ್ಲಿ ಮೋದಿ ಸರ್ಕಾರದ ಆಡಳಿತ ವೈಫಲ್ಯ ಮತ್ತು ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೀಂದ್ರದಾಸ್, ಫ್ರಾನ್ಸ್‍ನೊಂದಿಗೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯುದ್ದ ವಿಮಾನ ಖರೀದಿಯ ಜವಾಬ್ದಾರಿಯನ್ನು ವಿಮಾನ ತಯಾರಿಕೆಯಲ್ಲಿ ಅನುಭವ ಇರುವ ಎಚ್‍ಎಎಲ್‍ಗೆ ನೀಡದೇ, ಅನಿಲ್ ಅಂಬಾನಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ವಿಮಾನ ತಯಾರಿಕೆಯಲ್ಲಿ ಯಾವ ಅನುಭವವೂ ಇಲ್ಲದ ರಿಲಾಯನ್ಸ್ ಡಿಫೆನ್ಸ್‍ಗೆ ನೀಡಿ, ಯುದ್ದ ವಿಮಾನ ಖರೀದಿಯಲ್ಲಿ ಸುಮಾರು 41 ಸಾವಿರ ಕೋಟಿರೂ.ಗಳಷ್ಟು ಅವ್ಯವಹಾರ, ಹಗರಣ ನಡೆಸಿದ್ದಾರೆ. ಇದು ಭಾರತದ ಇತಿಹಾಸದಲ್ಲಿಯೇ ಬಹು ದೊಡ್ಡ ಹಗರಣವಾಗಿದೆ ಎಂದು ಆರೋಪಿಸಿದರು.

      ಜಗತ್ತಿನಲ್ಲಿಯೇ ಹೆಸರುವಾಸಿಯಾಗಿರುವ ಹಾಗೂ ದೇಶದ ಭದ್ರತೆಗೆ ಸಾಕಷ್ಟು ಸೇವೆ ನೀಡಿರುವ ಎಚ್‍ಎಎಲ್ ಸಾಮಥ್ರ್ಯದ ಬಗ್ಗೆಯೇ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೇವಲವಾಗಿ ಮಾತನಾಡಿ ಎಚ್‍ಎಎಲ್‍ಗೆ ಅವಮಾನಿಸಿದ್ದಾರೆ. ತಾವು ದಕ್ಷ, ಪ್ರಾಮಾಣಿಕರೆಂದು ಹೇಳಿಕೊಳ್ಳುವ ಪ್ರಧಾನಿ ಮೋದಿ, ರಫೇಲ್ ಯುದ್ದ ವಿಮಾನ ಖರೀದಿ ಹಗರಣದ ಬಗ್ಗೆ ಈವರೆಗೆ ಚಕಾರ ಎತ್ತಿಲ್ಲ ಎಂದು ಪ್ರಶ್ನಿಸಿದರು.

       ಫ್ರಾನ್ಸ್‍ನ ಮಾಜಿ ಅಧ್ಯಕ್ಷ ಹಾಲಂಡೇ ಹೇಳಿರುವ ಪ್ರಕಾರ ಮೋದಿ ಸರ್ಕಾರವೇ ರಫೇಲ್ ಯುದ್ದ ವಿಮಾನ ಖರೀದಿಗೆ ಅನಿಲ್ ಅಂಬಾನಿ ಕಂಪೆನಿಗೆ ನೀಡುವಂತೆ ಪ್ರಸ್ತಾಪ ಇಟ್ಟಿತ್ತು ಎಂಬುದಾಗಿ ಹೇಳಿರುವುದನ್ನು ಗಮನಿಸಿದರೆ, ಕೇಂದ್ರ ಸರ್ಕಾರ ಈ ಹಗರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಬೇಕೆಂದು ಆಗ್ರಹಿಸಿದರು.

      ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಮಾತನಾಡಿ, ಕೇಂದ್ರ ಸರಕಾರ ರಫೇಲ್ ಹಗರಣ ನಡೆಸಿದೆ. ಪ್ರಧಾನಿ ಮೋದಿ ಕಳ್ಳರ ರಕ್ಷಣೆ ನಿಂತಿದ್ದಾರೆ. ರಫೇಲ್ ಹಗರಣದ ಹೊಣೆ ಹೊತ್ತು ಪ್ರಧಾನಿ ತಕ್ಷಣವೇ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬೈಕ್ ರ್ಯಾಲಿಯಲ್ಲಿ ಪಕ್ಷದ ಯುವ ಮುಖಂಡರಾದ ಅಮೃತ್ ಗೌಡ, ಶಿವಕಮಾರ, ಪ್ರವೀಣ ಹುಲ್ಮನಿ, ಎಲ್.ಎಚ್.ಸಾಗರ್, ಹರೀಶ, ಪ್ರವೀಣ, ಎಚ್.ಜೆ.ಮೈನುದ್ದೀನ್, ಖಾಲಿದ್ ಪೈಲ್ವಾನ್, ರೋಷನ್ ಜಾಮೀರ್, ಸಾದಿಕ್ ಸದ್ದಾಂ, ಶಿವು, ಚಂದ್ರು, ಮಧು ಎಸ್.ಗೌಡ, ಸೈಯದ್ ಶೋಯಬ್, ಅಜಮ್, ಸುಭಾನ್ ಸಾಬ್, ನವೀದ್ ಬಾಷಾ, ಸಾದಿಕ್, ಮುಸ್ತಫಾ, ಸಂದೀಪ್, ನದೀಂ, ನೂರುಲ್ಲಾ, ಗೋವಿಂದ, ಅಯಾಜ್ ಅಹಮ್ಮದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link