ತಾಯಿ-ಮಗಳು ಬೆಂಕಿಗಾಹುತಿ..!?

ತುಮಕೂರು:

       ಬೆಂಕಿ ಹಚ್ಚಿಕೊಂಡು ತಾಯಿ-ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ತಾಲೂಕಿನ ಬಿದಲೋಟಿ ಬಳಿ ನಡೆದಿದೆ.

      ತಾಯಿ ರಮ್ಯಾ(23), ಮಗಳು ಬಿಂದು(4) ಗ್ರಾಮದ ಹೊರವಲಯದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ

      ರಮ್ಯಾ ರವರಿಗೆ 7 ವರ್ಷದ ಹಿಂದೆ ಹೊನ್ನಾರನಹಳ್ಳಿಯ ಮಹೇಶ್ ಜತೆ ವಿವಾಹವಾಗಿತ್ತು. 15 ದಿನದಿಂದ ತವರು ಮನೆಯಲ್ಲೇ ಇದ್ದರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link