ಸಿರುಗುಪ್ಪ :
ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಕೇವಲ ಪಠ್ಯ ವಿಷಯಗಳಲ್ಲದೆ ಭಾಷಣ ಕಲೆ, ಪ್ರಬಂಧ, ನೃತ್ಯ, ಧಾರ್ಮಿಕ ಪಠಣ, ಮಣ್ಣಿನ ಆಕೃತಿಗಳ ರಚನೆಯಲ್ಲಿ ತರಬೇತಿ ನೀಡಿ ಶಿಕ್ಷಕರು ವಿದ್ಯಾರ್ಥಿಗಳ ಸಂಪೂರ್ಣ ವಿಕಾಸಕ್ಕೆ ಉತ್ತೇಜನ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಾಂತ್ರಿ ತಿಳಿಸಿದರು.
ನಗರದ ಕೃಷ್ಣದೇವರಾಯ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಫ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಪ್ರಾ.ಶಾ.ಶಿ.ಸಂ. ಕಾರ್ಯದರ್ಶಿ ದಿವಾಕರನಾರಾಯಣ, ಡಾ.ಎಸ್.ಚಂದ್ರಮೌಳಿ, ಎಂ.ಸುರೇಶ್, ಎಂ.ಪಂಪಾಪತಿಗೌಡ, ಬಿ.ಈರಣ್ಣ, ಬಸವನಗೌಡ, ಬಸವರಾಜಯ್ಯ, ಅಬ್ದುಲ್ ಶುಕೂರ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲಿಗಾರ್ ವೆಂಕಟೇಶ್, ಮುಖ್ಯಗುರು ಅಂಬರೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಚಾಗಪ್ಪ, ಎಸ್.ಯೋಗಾನಂದಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯರಂಗಾರೆಡ್ಡಿ, ಇನ್ನಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ