ಪ್ರತಿನಿತ್ಯದ ಯೋಗ ವ್ಯಕ್ತಿಯ ಕ್ರಿಯಾಶೀಲತೆಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಸಹ ಸುಧಾರಣೆ ಮಾಡುತ್ತದೆ.

ಚಳ್ಳಕೆರೆ

       ಪ್ರತಿನಿತ್ಯ ಯೋಗಾಸನದಲ್ಲಿ ನಿರತರಾದರೆ ನಮ್ಮ ದೇಹದ ಎಲ್ಲಾ ಅಂಗಾಂಗಗಳು ಮತ್ತಷ್ಟು ಗಟ್ಟಿಯಾಗುವುದಲ್ಲದೆ, ಹೆಚ್ಚು ಕ್ರಿಯಾಶೀಲವಾಗುತ್ತವೆ. ನಿತ್ಯದ ಯೋಗದಿಂದ ಆರೋಗ್ಯ ಸುಧಾರಣೆಯಲ್ಲದೆ ಹಲವಾರು ಮಾರಕ ರೋಗಗಳನ್ನು ಸಹ ನಿಯಂತ್ರಿಸ ಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಸರ್ವರೀತಿಯಲ್ಲೂ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ಯೋಗವನ್ನು ಕಲಿತಲ್ಲಿ ಆರೋಗ್ಯವಂತರಾಗಿ ಹೆಚ್ಚು ಕಾಲ ನೆಮ್ಮದಿಯ ಜೀವನ ಸಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ, ಖ್ಯಾತ ಮಕ್ಕಳ ತಜ್ಞ ಡಾ.ಜಿ.ತಿಪ್ಪೇಸ್ವಾಮಿ ತಿಳಿಸಿದರು.

        ಅವರು, ಭಾನುವಾರ ಇಲ್ಲಿನ ರಾಮಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಉಚಿತ ಮಧುಮೇಹ ನಿಯಂತ್ರಣ ಚಿಕಿತ್ಸಾತ್ಮಕ ಶಿಬಿರವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಾವು ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಯೋಗವನ್ನು ನಿತ್ಯ ಮಾಡುವುದರಿಂದ ನಾವು ಅಂದಿನ ಎಲ್ಲಾ ಚಟುವಟಿಕೆಗಳನ್ನು ದಕ್ಷತೆಯಿಂದ ಮಾಡಲು ಅನುಕೂಲವಾಗುತ್ತದೆ . ಯೋಗ ಮಾಡುವುದರಿಂದ ನಮ್ಮಲ್ಲಿರುವ ಅಲಸ್ಯ, ಸೋಮಾರಿತನ ದೂರವಾಗುತ್ತದೆ. ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಯೋಗದಿಂದ ಮಾತ್ರ ಸಾಧ್ಯವೆಂದರು. 

       ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಸದಸ್ಯ ಕೆ.ಸಿ.ನಾಗರಾಜು, ಶ್ರೀಪತಂಜಲಿ ಯೋಗ ಶಿಕ್ಷಣ ಕೇಂದ್ರ ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ವಿವಿಧ ಶಾಖೆಗಳ ಮೂಲಕ ಜನರಿಗೆ ಯೋಗಾಸನವನ್ನು ಕಲಿಸಿಕೊಡುವ ಮೂಲಕ ಎಲ್ಲರಲ್ಲೂ ಉತ್ತಮ ಆರೋಗ್ಯವನ್ನುಂಟು ಮಾಡಲು ಸಹಕರಿಸಿದ್ದಾರೆ. ಪ್ರತಿನಿತ್ಯ ಯೋಗ ಮಾಡುವುದರಿಂದ ನಮಗೆ ಇನ್ನೂ ಹೆಚ್ಚಿನ ಉತ್ಸಾಹ ಉಂಟಾಗುತ್ತದೆ. ಯೋಗ ನಮ್ಮ ಪೂರ್ವಜರಿಂದ ಬಂದ ಕೊಡುಗೆಯಾಗಿದೆ. ಪ್ರತಿಯೊಬ್ಬರೂ ಯೋಗಾಸನ ಮಾಡುವ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

       ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಹನುಮಂತಪ್ಪ, ಉಚಿತ ಮಧುಮೇಹ ನಿಯಂತ್ರಣ ಚಿಕಿತ್ಸಾತ್ಮಕ ಶಿಬಿರವನ್ನು 21 ದಿನಗಳ ಕಾಲ ನಡೆಸಲಾಗುವುದು. ಈ ಶಿಬಿರದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆ ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದಾರೆ. ಮಧುಮೇಹದಿಂದ ಚಿಂತನೆಗೊಳಗಾದ ಪ್ರತಿಯೊಬ್ಬರೂ ಇಂತಹ ಶಿಬಿರದಲ್ಲಿ ಪಾಲ್ಗೊಂಡರೆ ಶಿಬಿರದಲ್ಲಿ ಮಧುಮೇಹವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ಯೋಗ ಪ್ರಯೋಗಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಪ್ರತಿಯೊಬ್ಬರು ಇಲ್ಲಿ ನೀರುವ ಸಲಹೆ ಸೂಚನೆಯನ್ನು ಅಳವಡಿಸಿಕೊಂಡಲ್ಲಿ ಮಾತ್ರ ಅವರ ಆರೋಗ್ಯ ಸುಧಾರಣೆಯಾಗುತ್ತದೆ. ನಗರದ ವಿವಿಧ ಬಡಾವಣೆಗಳಲ್ಲಿ ಯೋಗ ಶಿಕ್ಷಣ ನೀಡುವ ಕೇಂದ್ರಗಳಿದ್ದು, ಎಲ್ಲರೂ ಈ ಕೇಂದ್ರಗಳ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.

        ಕಾರ್ಯಕ್ರಮದಲ್ಲಿ ಯೋಗ ಮುಖ್ಯ ಶಿಕ್ಷಕ ಬಿ.ವಿ.ಮನೋಹರ, ವ್ಯವಸ್ಥಾಪಕ ಪ್ರಮುಖ ಸಿ.ಶಿವನಾಗಪ್ಪ, ಚಿಕಿತ್ಸಾತ್ಮಕ ಶಿಕ್ಷಕರಾದ ಬಿ.ವಿ.ನಾಗೇಶ್, ಧನುಂಜಯ, ಎಚ್.ಜೆ.ಮಂಜುನಾಥ, ಪ್ರಚಾರ ಪ್ರಮುಖ ಸಿ.ತಿಪ್ಪೇಸ್ವಾಮಿ, ಕೆ.ಪಿ.ನಾಗಭೂಷಣ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap