ನವದೆಹಲಿ:
ಕೇರಳದಲ್ಲಿನ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋವರ್ಗದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ ಮೇಲ್ಮನವಿಯನ್ನು ಸಲ್ಲಿಸಲಾಗಿದೆ.
ನ್ಯಾಶನಲ್ ಅಯ್ಯಪ್ಪ ಡಿವೋಟೀಸ್ ಅಸೋಸಿಯೇಶನ್ ಅಧ್ಯಕ್ಷ ಶೈಲಜ ವಿಜಯನ್ ಅವರು, ಸುಪ್ರೀಂಕೋರ್ಟ್ನ ತೀರ್ಪು ಸಾವಿರಾರು ಜನ ಅಯ್ಯಪ್ಪನ ಭಕ್ತರ ಮೂಲಭೂತ ಹಕ್ಕುಗಳು ಹಾಗೂ ದೇಗುಲದಲ್ಲಿರುವ ದೈವತ್ವದ ಮೇಲೆ ಪರಿಣಾಮ ಬೀರುತ್ತದೆ. ಪ್ರವೇಶ ನೀಡಲು ಅವಕಾಶ ಕೊಡುವಂತೆ ಸುಪ್ರೀಂಕೋರ್ಟ್ಗೆ ಹೋದವರು ನಿಜಕ್ಕೂ ಅಯ್ಯಪ್ಪನ ಭಕ್ತರಲ್ಲ ಎಂದು ಈ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.
ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಯಾವುದೇ ಮೇಲ್ಮನವಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದ ಬಳಿಕ ಭಕ್ತರ ಪ್ರತಿಭಟನೆ ಹೆಚ್ಚಾಗಿತ್ತು. ಅಲ್ಲದೆ, ಪಂಡಾಲಂ ಅರಮನೆ ಪ್ರತಿನಿಧಿಗಳು, ದೇವಸ್ಥಾನದ ತಂತ್ರಿಗಳು ಮುಖ್ಯಮಂತ್ರಿಯೊಂದಿಗೆ ಈ ವಿಚಾರದ ಮಾತುಕತೆ ನಡೆಸಲೂ ನಿರಾಕರಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ