ಸಿರುಗುಪ್ಪ :
ನಗರದ ಪೊಲೀಸ್ ಠಾಣೆಯಲ್ಲಿ ವಲಯವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಬಳ್ಳಾರಿ ನಗರದ ಕೌಲಬಜಾರ್ ಠಾಣೆಗೆ ವರ್ಗಾವಣೆ ಗೊಂಡಿರುವ ಸಿ.ಪಿ.ಐ ಚಂದನಗೋಪಾಲರವರನ್ನು ಬೀಳ್ಕೋಡಿಗೆ ನೀಡಿ ಹಾಗೂ ನೂತನ ವಲಯವೃತ್ತ ನಿರೀಕ್ಷಕರಾಗಿ ಆಗಮಿಸಿದ ಮೌನೇಶ್ವರ್ ಮಾಲಿಪಾಟೇಲ್ ಅವರನ್ನು ಪಿಎಸ್‍ಐ ಎನ್.ರಘು ಮತ್ತು ಸಿಬ್ಬಂದಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮೌನೇಶ್ವರ ಮಾಲಿ ಪಾಟೀಲ್ ಮಾತನಾಡಿ ಬಡವರ ದಿನದಲಿತ ಪರ ಸೇವೆ ಸಲ್ಲಿಸಲು ಒಳ್ಳೆಯ ಅವಕಾಶ ದೊರತಿದ್ದು ಸಿರುಗುಪ್ಪ ಜನರು ಶಾಂತಿ ಪ್ರೀಯರಾಗಿದ್ದು ಇಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಿಗೆ ಅವಕಾಶ ಇಲ್ಲದೆ ಇರುವುದರಿಂದ ಪೊಲೀಸ್ ಇಲಾಖೆಯು ಜನ ಸ್ನೇಹಿಯಾಗಿದ್ದು ಸಾರ್ವಜನಿಕರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ವರ್ಗಾವಣೆಗೊಂಡ ಸಿ.ಪಿ.ಐ ಚಂದನಗೋಪಾಲ ಮಾತನಾಡಿ ಪೊಲೀಸ್ ಅಧಿಕಾರಿಗೆ ಯಾವುದೇ ಧರ್ಮ ದೇವರ ಮೇಲೆ ನಂಬಿಕೆ ಇರಬಾರದು, ವೈಯಕ್ತಿಕ ಆಚರಣೆಗಳನ್ನು ಮನೆಗೆ ಸೀಮಿತಗೊಳಿಸಿ ಸಮಾಜದಲ್ಲಿ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣಬೇಕು, ಜನರ ಸೇವೆಯಲ್ಲಿ ಭಗವಂತನನ್ನು ಕಾಣಬೇಕು, ಠಾಣೆಗೆ ನೊಂದು ಕಣ್ಣೀರು ಇಡುತ್ತಾ ಬರುವವರ ದುಃಖವನ್ನು ಪರಿಹಾರಿಸಿದಲ್ಲಿ ಸಿಗುವ ಆತ್ಮ ತೃಪ್ತಿಯೇ ಹಿರಿದಾಗಿದ್ದು, ನನ್ನ ಸೇವಾ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಾಕರಿಸಿದ ಠಾಣೆಯ ಎಲ್ಲಾ ಸಿಬ್ಬಂದಿಗೆ ಹಾಗೂ ತಾಲೂಕಿನ ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬಿ.ಜಿ.ಮಂಜುನಾಥ, ಅರುಣಾಪ್ರತಾಪ್ ರೆಡ್ಡಿ, ಮುತ್ಯಾಲಯ್ಯ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ