ಬೆಂಗಳೂರು : 100 ಹೊಸ ಟ್ರಾಫಿಕ್ ಸಿಗ್ನಲ್ ಗಳ ಅಳವಡಿಕೆಗೆ ಯೋಜನೆ

ಬೆಂಗಳೂರು:

      ಬೆಂಗಳೂರಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಹೊಸ 100 ಸಿಗ್ನಲ್ ಅಳವಡಿಕೆಗೆ ಸಂಚಾರ ಪೊಲೀಸರು ಮುಂದಾಗಿದ್ದಾರೆ.

      ಈ ಕುರಿತು ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ ಅವರು ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜೊತೆಗೂಡಿ ನಗರದಲ್ಲಿರುವ ಟ್ರಾಫಿಕ್ ಸಿಗ್ನಲ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜೊತೆಗೆ 100 ಹೊಸ ಸಿಗ್ನಲ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಬಂಧಿತ ಚಿತ್ರ

      ಈಗಿರುವ ಸಿಗ್ನಲ್‌ಗಳಲ್ಲಿ ಸಮಯವನ್ನು ತೋರಿಸುವ ಸಿಗ್ನಲ್‌ಗಳು ಕಡಿಮೆ ಇದೆ, ಇನ್ನೊಂದೆಡೆ ಸಿಗ್ನಲ್ ಗೆ ಕಾಯುತ್ತಿರುವ ವಾಹನ ಸವಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ, ಸಮಯವನ್ನು ತೋರಿಸುವ ಸಿಗ್ನಲ್‌ಗಳನ್ನು ಹೆಚ್ಚೆಚ್ಚು ಅಳವಡಿಸಬೇಕಿದೆ. ಆಗ ಇಂಧನವನ್ನೂ ಹೆಚ್ಚು ಉಳಿತಾಯಮಾಡಬಹುದು. ಇನ್ನು ಎಷ್ಟು ಸಮಯ ಇದೆ ಎಂದು ಮೊದಲೇ ತಿಳಿದರೆ ವಾಹನವನ್ನು ಆಫ್ ಮಾಡಿಕೊಂಡು ನಿಲ್ಲಬಹುದಾಗಿದೆ. 

      ಕಾಂಬೋಡಿಯಾ, ಮಯನ್ಮಾರ್, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಜೆಐಸಿಎ ಅಭಿವೃದ್ದಿಪಡಿಸಿರುವ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆ ಯಶಸ್ವಿಯಾಗಿದ್ದು,  ಈಗ ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

      2019ರ ವೇಳೆ ಜಪಾನ್ ಮಾದರಿಯ 29 ಸಿಗ್ನಲ್ ಗಳು ಬೆಂಗಳೂರಿಗೆ ಕಾಲಿಡಲಿವೆ. ಜಪಾನ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿಯು ಸುಮಾರು 72 ಕೋಟಿ ಹಣವನ್ನು ಹೂಡಿಕೆ ಮಾಡಲಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

 

Recent Articles

spot_img

Related Stories

Share via
Copy link